ಸಂಗ್ರಹ ಚಿತ್ರ 
ದೇಶ

ಪುರಿ ಜಗನ್ನಾಥ ರಥ ಯಾತ್ರೆ: ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಪುರಿಯ ಜಗನ್ನಾಥ ದೇವರ ರಥ ಯಾತ್ರೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ...

ನವದೆಹಲಿ: ಪುರಿಯ ಜಗನ್ನಾಥ ದೇವರ ರಥ ಯಾತ್ರೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಅವರು,ಪುರಿ ಜಗನ್ನಾಥ ರಥ ಯಾತ್ರೆಯ ಶುಭ ಗಳಿಗೆಯಲ್ಲಿ ದೇಶದ ಜನತೆಗೆ ಶುಭಾಶಯಗಳು. ಜಗನ್ನಾಥ ದೇವರ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ, ಶಾಂತಿ, ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ದೇಶದ ಜನತೆಗೆ ಪುರಿ ಜಗನ್ನಾಥ ರಥ ಯಾತ್ರೆ ಸಂದರ್ಭದಲ್ಲಿ ಶುಭ ಕೋರಿದ್ದಾರೆ. 
ಒರಿಸ್ಸಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರತ ಯಾತ್ರೆ ಇಂದು ಆರಂಭವಾಗಿದೆ. ರಥ ಯಾತ್ರೆಯಲ್ಲಿ ಮೂರು ದೇವತೆಗಳಾದ ಬಲಭದ್ರ, ಜಗನ್ನಾಥ ಮತ್ತು ಸುಭದ್ರಾ ದೇವಿಯ ಮೂರ್ತಿಗಳನ್ನು ಪ್ರತಿವರ್ಷ ನಿರ್ಮಿಸಲಾಗುತ್ತದೆ. ಸಾಂಪ್ರದಾಯಿಕ ಕಲಾವಿದರು ಮೂರ್ತಿಗಳನ್ನು ತಯಾರಿಸಿ ಅಲಂಕಾರ ಮಾಡುತ್ತಾರೆ. ದೇವರನ್ನು ಹೊರುವ ರಥ ನಿರ್ಮಿಸಲು ಆರಂಭಿಸುವುದು ಪವಿತ್ರ ಅಕ್ಷಯ ತೃತೀಯ ದಿನ.
ಹಲವು ತಿಂಗಳುಗಳ ಕಾಲ ಸಾವಿರಾರು ಕುಶಲಕರ್ಮಿಗಳು ಮರ ಕಡಿಯುವುದರಿಂದ ಹಿಡಿದು ರಥವನ್ನು ಜೋಡಿಸುವುದು, ಚಿತ್ರಕಲೆ ಮಾಡುವ ಕೆಲಸ ಮಾಡುತ್ತಾರೆ. ಪುರಿ ಜಗನ್ನಾಥ ಸ್ವಾಮಿಯ ಯಾತ್ರೆಯಲ್ಲಿ ರಥವು ಮುಖ್ಯ ಆಕರ್ಷಣೆಯಾಗಿರುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!