ದೇಶ

ಕಾರ್ಗಿಲ್ ಯುದ್ಧದ 20 ವರ್ಷಗಳ ಬಳಿಕ ಆಪರೇಷನ್ ವಿಜಯ್ ನೆನಪು ಮರುಸೃಷ್ಟಿ: ಸೇನೆಯಿಂದ ಹುತಾತ್ಮರಿಗೆ ನಮನ

Srinivas Rao BV
ಕಾರ್ಗಿಲ್: ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ ಭಾರತೀಯ ಸೇನೆ ಆಪರೇಷನ್ ವಿಜಯ್ ನೆನಪನ್ನು ಮರುಸೃಷ್ಟಿ ಮಾಡಿದೆ. 
2 ರಜಪುತಾನ ರೈಫಲ್ಸ್ ತಂಡ ತೊಲೊಲಿಂಗ್ ತುದಿಗೆ ಕಾಲ್ನಡಿಗೆಯಲ್ಲಿ ತಲುಪಿದ್ದು, ಟೈಗರ್ ಹಿಲ್ ನಲ್ಲಿ ಬಲಿದಾನ ಮಾಡಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸಿದ್ದಾರೆ. ಇದೇ ವೇಳೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 
ಕಾಲ್ನಡಿಗೆಯಲ್ಲಿ ತೊಲೊಲಿಂಗ್ ತುದಿಗೆ ತಲುಪಿದ್ದನ್ನು ಭಾರತೀಯ ಸೇನೆಯ ಉತ್ತರ ಕಮಾಂಡ್ ಟ್ವೀಟ್ ಮಾಡಿದ್ದು, ಅಸಮಾನ್ಯ ವಿಜಯವನ್ನು ಆಚರಣೆ ಮಾಡುತ್ತಿರುವುದಾಗಿ ಹೇಳಿದೆ.
ಜೂ.22 ರಂದು ಜೈಸಲ್ಮೇರ್ ನಿಂದ 2 ಆರ್ ಎಜೆಆರ್ ಐ ಎಫ್ ನ ತಂಡ ತೊಲೊಲಿಂಗ್ ಬೆಟ್ಟಕ್ಕೆ ಕಾಲ್ನಡಿಗೆಯನ್ನು ಪ್ರಾರಂಭಿಸಿತ್ತು. ಇದೇ ವೇಳೆ ಜಮ್ಮು-ಕಾಶ್ಮೀರ್ ರೈಫಲ್ಸ್ ತಂಡವೂ ಬಾತ್ರಾ ಟಾಪ್ ಹಾಗೂ ಟೈಗರ್ ಹಿಲ್ ಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಆಪರೇಷನ್ ವಿಜಯ್ ನೆನಪಿನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ. 
SCROLL FOR NEXT