ದೇಶ

ಜಾಲಿ ರೈಡ್ ದುರಂತ: ಮಸ್ತಿ ಮಾಡಲು ಬಂದವರು ಮಸಣ ಸೇರಿದರು!

Vishwanath S
ಅಹ್ಮದಾಬಾದ್: ರಜೆಯ ಖುಷಿಯಲ್ಲಿ ಜಾಲಿ ರೈಡ್ ಗೆ ಬಂದಿದ್ದಾಗ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು 15 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ. 
ಕಂಕರಿಯಾ ಲೇಕ್ ಫ್ರಾಂಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರು ಪೆಂಡುಲಮ್ ರೈಡ್ ಮಾಡುವಾಗ ಕೇಬಲ್ ತಂತಿಗಳು ಕಿತ್ತು ಹೋಗಿ ಈ ಅನಾಹುತ ಸಂಭವಿಸಿದ್ದು ಪರಿಣಾಮ ಇಬ್ಬರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. 
ಮೃತರನ್ನು 24 ವರ್ಷದ ಮನಾಲಿ ರಾಜ್ವಾದಿ ಮತ್ತು 22 ವರ್ಷದ ಮೊಹಮ್ಮದ್ ಜಹೀದ್ ಮೊಮಿನ್ ಎಂದು ಗುರುತಿಸಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
SCROLL FOR NEXT