ದೇಶ

'ಟೋಲ್ 'ಇಸ್ ಮೈ ಬ್ರೈನ್ ಚೈಲ್ಡ್ : ಉತ್ತಮ ಸೇವೆ ಬೇಕು ಅಂದರೆ ಟೋಲ್ ಕಟ್ಟಿ: ನಿತಿನ್ ಗಡ್ಕರಿ

Shilpa D
ನವದೆಹಲಿ: ಸರ್ಕಾರದ ಬಳಿ ಹಣವಿಲ್ಲ, ಉತ್ತಮ ರಸ್ತೆಗಳು ಬೇಕೆಂದರೇ ಜನ ಟೋಲ್ ನಲ್ಲಿ ಹಣ ಪಾವತಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಸ್ತೆ ಮತ್ತು ಹೆದ್ದಾರಿಗೆ ಅನುದಾನ ಬಿಡುಗಡೆ ಸಂಬಂಧ ಬಂದ ಬೇಡಿಕೆಗೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ, ಕಳೆದ 5 ವರ್ಷಗಳಲ್ಲಿ ಸರ್ಕಾರ 40 ಸಾವಿರ ಕಿಮೀ ಹೆದ್ದಾರಿ ನಿರ್ಮಿಸಿದೆ ಎಂದು ಹೇಳಿದರು,
ಇದೇ ವೇಳೆ ದೇಶದ ವಿವಿಧ ಭಾಗಗಳ ಹೆದ್ದಾರಿಯಲ್ಲಿ ಟೋಲ್ ವಸೂಲಾತಿ ಬಗ್ಗೆ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪಾವತಿಸಲು ಸಮರ್ಥರಿರುವ ಸ್ಥಳಗಳಲ್ಲಿ ಮಾತ್ರ ಟೋಲ್ ವಸೂಲಿ ಮಾಡಲಾಗುತ್ತಿದೆ, ಅದರ ಮೂಲಕ ಗ್ರಾಮೀಣ ಮತ್ತು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಟೋಲ್ ಇಸ್ ಮೈ ಬ್ರೈನ್ ಚೈಲ್ಡ್, ಸುಂಕ ವಸೂಲಾತಿಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ, ಸಮಯಕ್ಕೆ ತಕ್ಕಂತೆ ದರದಲ್ಲಿ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.
SCROLL FOR NEXT