ಹೈದ್ರಾಬಾದ್: ಅನಂತಪುರ ಜಿಲ್ಲೆಯ ಕೊರ್ತಿಕೊಟಾ ಗ್ರಾಮದ ಶಿವಾ ದೇವಾಲಯ ಆವರಣದಲ್ಲಿ ಕತ್ತು ಸೀಳಿದ ರೀತಿಯಲ್ಲಿ ಬಿದಿದ್ದ ಮೂವರ ಮೃತದೇಹವನ್ನು ಕಂಡ ಭಕ್ತರು ಬೆಚ್ಚಿ ಬಿದಿದ್ದಾರೆ.
ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತದೇಹ ಈ ರೀತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು 70 ವರ್ಷದ ಶಿವರಾಮಿ ರೆಡ್ಡಿ, ಆತ ತಂಗಿ 75 ವರ್ಷದ ಕಡಪಲ್ಲ ಕಮಲಮ್ಮ ಹಾಗೂ 70 ವರ್ಷದ ಸತ್ಯ ಲಕ್ಷ್ಮೀಯಮ್ಮ ಎಂದು ಗುರುತಿಸಲಾಗಿದೆ.
ದೇವಾಲಯದ ಒಳಗೆ ಇರುವ 'ಶಿವಲಿಂಗ'ದ ಮೇಲೆ ಭಕ್ತರು ರಕ್ತ ಚಿಮುಕಿಸಿರುವುದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹತ್ಯೆಯಾಗಿರುವ ಮೂವರ ಪೈಕಿ ರೆಡ್ಡಿ ದೇವಾಲಯದ ಆರ್ಚಕನಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ
ದೇವಾಲಯದ ಹುಂಡಿ ಹೊಡೆಯಲು ಬಂದಿರುವ ಕಳ್ಳರಿಂದ ಈ ಕೊಲೆ ನಡೆದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ನರಬಲಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos