ದೇಶ

ಹಫೀಜ್ ಬಂಧನ: ಪಾಕಿಸ್ತಾನ ಜಗತ್ತನ್ನು ಮೂರ್ಖನನ್ನಾಗಿಸುತ್ತಿದೆ ಎಂದ ಉಜ್ವಲ್ ನಿಕಮ್

Lingaraj Badiger
ಮುಂಬೈ: ಮುಂಬೈ ಉಗ್ರ ದಾಳಿಯ ರೂವಾರಿ ಹಾಗೂ ನಿಷೇಧಿತ ಜಾಮತ್‌ ಉದ್ ದಾವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಂಧಿಸುವ ಮೂಲಕ ಪಾಕಿಸ್ತಾನ ಜಗತ್ತನ್ನು ಮೂರ್ಖನನ್ನಾಗಿ ಮಾಡುತ್ತಿದೆ ಎಂದು ಮುಂಬೈ ಉಗ್ರ ದಾಳಿ ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಫೀಜ್ ಸಯೀದ್ ಬಂಧನ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಿಕಮ್ ಅವರು, ಪಾಕಿಸ್ತಾನ ಜಗತ್ತನ್ನು ಮೂರ್ಖನನ್ನಾಗಿ ಮಾಡುತ್ತಿದೆ. ಅವರು ಕೋರ್ಟ್ ಗೆ ಯಾವ ಸಾಕ್ಷ್ಯಗಳನ್ನು ನೀಡುತ್ತಾರೆ ಎಂಬುದನ್ನು ನಾವು ನೋಡಬೇಕಿದೆ ಮತ್ತು ಮುಂಬೈ ದಾಳಿ ಪ್ರಕರಣದಲ್ಲಿ ಆತನನ್ನು ತಪ್ಪಿತಸ್ಥನನ್ನಾಗಿ ಮಾಡಲು ಪಾಕ್ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಇದು ಬರೀ ನಾಟಕ ಎಂದು ಟೀಕಿಸಿದ್ದಾರೆ.
ಹಫೀಜ್ ಸಯೀದ್‌ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ದಳ ಇಂದು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಗರಿಷ್ಠ ಭದ್ರತೆಯ ಕೋಟ್ ಲಖ್‌ಪತ್ ಜೈಲಿಗೆ ಸಯೀದ್‌ನನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT