ದೇಶ

ಬ್ಯಾಂಕಿಂಗ್ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ- ನಿತಿನ್ ಗಡ್ಕರಿ

Nagaraja AB
ನಾಗಪುರ: ಬ್ಯಾಂಕಿಂಗ್ ಕ್ಷೇತ್ರವು ವಿವಿಧ ರಂಗಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೇಂದ್ರ  ಹೆದ್ದಾರಿ ಮತ್ತು ರಸ್ತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪಾರದರ್ಶಕತೆಯನ್ನು ಖಾತರಿಪಡಿಸುವುದು ಮತ್ತು ಠೇವಣಿಗಳ ಮೇಲಿನ ಆದಾಯವನ್ನು ನೀಡುವುದು ಬ್ಯಾಂಕಿಂಗ್ ಕ್ಷೇತ್ರದ ಮುಂದೆ ಪ್ರಮುಖ ಸವಾಲಾಗಿದೆ ಎಂದಿದ್ದಾರೆ.
ಇಂಡಿಯನ್ ಬ್ಯಾಂಕ್ ವಲಯ ಕಚೇರಿ ಉದ್ಘಾಟನೆ ನಂತರ ಮಾತನಾಡಿದ ಅವರು,  ಜನರು ಕೂಡಾ ಬಾಕಿಯನ್ನು ನಿಗದಿತ ವೇಳೆಗೆ ಪಾವತಿಸಬೇಕು ಎಂದರು.
ಎಎಸ್ ಎಂಇಗಳಿಗೆ 59 ನಿಮಿಷಗಳಲ್ಲಿ ಸಾಲ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಈ ವ್ಯಜಿಎಸ್ ಟಿ ಮತ್ತು ಆದಾಯ ತೆರಿಗೆಗೂ ಇದನ್ನು ಸೇರ್ಪಡೆ ಮಾಡಲಾಗುವುದು, ಉತ್ತಮ ದಾಖಲೆಯನ್ನು ಹೊಂದಿರುವವರು ಸಾಲಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಎಂಎಸ್ ಎಂಇ ಕ್ಷೇತ್ರದಲ್ಲಿ ಪ್ರಗತಿ ಹಾಗೂ ಉದ್ಯೋಗವಕಾಶಗಳ ಸೃಷ್ಟಿ ಹಿನ್ನೆಲೆಯಲ್ಲಿ  ಕೈ ಮಗ್ಗ ಮತ್ತು ಕರಕುಶಲ  ಉದ್ಯಮಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ಚರಕ ಕ್ಲಸ್ಟರ್  ಮೂಲಕ ಮಹಿಳೆಯರು, ಯುವಕರ ಉದ್ಯೋಗ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
SCROLL FOR NEXT