ದೇಶ

ಕರ್ನಾಟಕದಂತೆ ಬಿಜೆಪಿ ದೇಶದೆಲ್ಲೆಡೆ ಕುದುರೆ ವ್ಯಾಪಾರದಲ್ಲಿ ತೊಡಗಿದೆ: ಮಮತಾ ಬ್ಯಾನರ್ಜಿ

ಬಿಜೆಪಿಯೊಂದಿಗೆ ಸಂಪರ್ಕಕ್ಕೆ ಬರದಿದ್ದಲ್ಲಿ ಚಿಟ್ ಫಂಡ್ ಹಗರಣದಲ್ಲಿ ಜೈಲಿಗೆ ಕಳಿಸುವುದಾಗಿ ನಮ್ಮ ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ಬೆದರಿಕೆಯೊಡ್ಡಿದೆ....

ಕೋಲ್ಕತ್ತಾ: ಬಿಜೆಪಿಯೊಂದಿಗೆ ಸಂಪರ್ಕಕ್ಕೆ ಬರದಿದ್ದಲ್ಲಿ ಚಿಟ್ ಫಂಡ್ ಹಗರಣದಲ್ಲಿ ಜೈಲಿಗೆ ಕಳಿಸುವುದಾಗಿ ನಮ್ಮ ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ಬೆದರಿಕೆಯೊಡ್ಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 
ಭಾನುವಾರ ಕೋಲ್ಕತ್ತಾದಲ್ಲಿ ಹುತಾತ್ಮರ ದಿನದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬಿಜೆಪಿ ಖಜಾನೆಯಲ್ಲಿರುವ ಕಪ್ಪು ಹಣ ಹೊರತರಬೇಕೆಂದು ನಮ್ಮ ಪಕ್ಷ  ಜುಲೈ 26 ರಂದು ಪಕ್ಷವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದರು.
"ಕೇಂದ್ರೀಯ ಸಂಸ್ಥೆಗಳು ನಮ್ಮ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಚಿಟ್ ಫಂಡ್ ಹಗರಣದ ಬಗ್ಗೆ  ಬೆದರಿಕೆ ಹಾಕುತ್ತಿವೆ, ಅವರು ಬಿಜೆಪಿ ಜತೆ ಸಂಪರ್ಕದಲ್ಲಿರಬೇಕು ಇಲ್ಲವೇ ಜೈಲುವಾಸ ಶಿಕ್ಷೆ ಅನುಭವಿಸಬೇಕೆಂದು ಅವು ಬೆದರಿಕೆಯೊಡ್ಡಿದೆ" ಬ್ಯಾನರ್ಜಿ ಹೇಳಿದರು.
ಟಿಎಂಸಿ ಶಾಸಕರಿಗೆ ಹಣ ಮತ್ತು ಇತರ ಸೌಕರ್ಯಗಗಳ ಆಮಿಷವೊಡ್ಡಿ ಕೇಸರಿ ಪಕ್ಷ ತನ್ನತ್ತ ಸೆಳೆದುಕೊಳ್ಳುತ್ತಿದೆ"ನಮ್ಮ ಶಾಸಕರಿ ಬಿಜೆಪಿ ಸೇರಿಕೊಳ್ಳಲು ತಲಾ  2 ಕೋಟಿ ರೂ ಮತ್ತು ಪೆಟ್ರೋಲ್ ಪಂಪ್ ಗಳ ಮಾಲಿಕತ್ವ ನೀಡುತ್ತಿದೆ. ಕರ್ನಾಟಕದಂತೆಯೇ ಬಿಜೆಪಿಯು ಎಲ್ಲೆಡೆ ಕುದುರೆ ವ್ಯಾಪಾರದಲ್ಲಿ ತೊಡಗಿದೆ" ಎಂದು ಬ್ಯಾನರ್ಜಿ ಆರೋಪಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ವಿಧಾನ ಗಮನಿಸಿದರೆ "ಎರಡು ವರ್ಷಗಳಿಗಿಂತ ಹೆಚ್ಚು ಕಾಲ" ಉಳಿಯುವುದಿಲ್ಲ ಎಂದು ಅವರು ಹೇಳಿದರು "ಸಂಸತ್ತಿನ ಸುಗಮ ಕಲಾಪಕ್ಕೆ ಬಿಜೆಪಿ ಅವಕಾಶ ನೀಡುತ್ತಿಲ್ಲ. ಅಲ್ಲದೆ ವಿರೋಧ ಪಕ್ಷಗಳಿಗೆ ದನಿ ಎತ್ತಲೂ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT