ದೇಶ

ಎಲ್ ಜಿಬಿಟಿ ಸಮುದಾಯಕ್ಕೆ ಮೀಸಲಾದ ನೇಮಕಾತಿ ಸಲಹಾ ಸಂಸ್ಥೆ

Sumana Upadhyaya
ನವದೆಹಲಿ: ಸಲಿಂಗಿಗಳ ಲೈಂಗಿಕ ಸಂಭೋಗ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ನಂತರ ದೇಶದಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು ಮೊತ್ತಮೊದಲ ಸಲಹಾ ನೇಮಕಾತಿ ಸಂಸ್ಥೆ ಅಸ್ಥಿತ್ವಕ್ಕೆ ಬರುತ್ತಿದೆ. ಇದು ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳ(ಎಲ್ ಜಿಬಿಟಿ) ಸಮುದಾಯದವರಿಗೆ ಮೀಸಲಾಗಿರುವ ಸಲಹಾ ನೇಮಕಾತಿ ಸಂಸ್ಥೆಯಾಗಿದೆ. 
ಸುಪ್ರೀಂ ಕೋರ್ಟ್ ತೃತೀಯ ಲಿಂಗಿಗಳು, ಸಲಿಂಗಿಗಳಿಗೆ ಪೂರಕವಾಗಿ ಕಾನೂನು ಮಾನ್ಯತೆ ನೀಡಿದರೂ ಕೂಡ ಭಾರತ ದೇಶದಲ್ಲಿ ಇಂತಹ ವ್ಯಕ್ತಿಗಳನ್ನು ಕೀಳು ದೃಷ್ಟಿಯಿಂದಲೇ ಕಾಣಲಾಗುತ್ತಿದೆ. ಅವರಿಗೆ ಉದ್ಯೋಗ, ಶಿಕ್ಷಣ, ವೇತನ, ಕಾರ್ಪೊರೇಟ್ ಪ್ರಾತಿನಿಧಿತ್ವಗಳಲ್ಲಿ ಉಳಿದವರಂತೆ ಸಮಾನವಾಗಿ ಕಾಣುತ್ತಿಲ್ಲ,
ಈ ತಾರತಮ್ಯವನ್ನು ಹೋಗಲಾಡಿಸಲು ಬೆಂಗಳೂರು ಮೂಲದ ಡೈವರ್ಸಿಟಿ ಅಂಡ್ ಇನ್ಕ್ಲುಸನ್-ಪ್ರೈಡ್ ಸರ್ಕಲ್ ಎಂಬ ಸಂಸ್ಥೆ ತನ್ನ ಕಂಪೆನಿಯಲ್ಲಿ ಒಂದು ವಿಭಾಗವನ್ನು ಎಲ್ ಜಿಬಿಟಿ ಸಮುದಾಯದವರಿಗೆ ಮೀಸಲಿಡಲು ನಿರ್ಧರಿಸಿದೆ. ಈ ಮೂಲಕ ಈ ಸಮುದಾಯದವರಿಗೆ ಉದ್ಯೋಗ ಸಲಹಾ ಮಾರುಕಟ್ಟೆಯನ್ನು ಒದಗಿಸುವುದಾಗಿದೆ.
SCROLL FOR NEXT