ದೇಶ

ಮೋದಿಯವರು 'ಮೆಡಿಟೇಟ್' ಎಂದಿದ್ದು ಟ್ರಂಪ್ ಗೆ 'ಮೀಡಿಯೇಟ್' ಎಂದು ಕೇಳಿರಬಹುದು: ಸಲ್ಮಾನ್ ಖುರ್ಷಿದ್

Sumana Upadhyaya
ಮುಂಬೈ: ಕಾಶ್ಮೀರ ವಿವಾದದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೋರಿದ್ದರು ಎಂದು ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಗದ್ದಲ, ಕೋಲಾಹಲ ಎಬ್ಬಿಸಿ ಪ್ರಧಾನಿ ಸ್ಪಷ್ಟನೆ ನೀಡುವಂತೆ ಕೂಡ ಹೇಳಿದ್ದಾರೆ.
ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಮೆಡಿಟೇಡ್(ಧ್ಯಾನ ಮಾಡಿ) ಎಂದು ಹೇಳಿದ್ದು ಟ್ರಂಪ್ ಅವರಿಗೆ ಮೀಡಿಯೇಟ್(ಮಧ್ಯಸ್ಥಿಕೆ ವಹಿಸು) ಎಂದು ಕೇಳಿ ಗೊಂದಲವಾಗಿರಬಹುದು ಎಂದು ಹಾಸ್ಯ ಮಾಡಿದ್ದಾರೆ.
ಸಲ್ಮಾನ್ ಖುರ್ಷಿದ್ ನಿನ್ನೆ ಮುಂಬೈಯಲ್ಲಿ ತಮ್ಮ ವಿಸಿಬಲ್ ಮುಸ್ಲಿಂ, ಇನ್ವಿಸಿಬಲ್ ಸಿಟಿಜೆನ್: ಅಂಡರ್ ಸ್ಟಾಂಡಿಂಗ್ ಇಸ್ಲಾಂ ಇನ್ ಇಂಡಿಯನ್ ಡೆಮಾಕ್ರಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿ ಸಂವಹನದ ಸಮಸ್ಯೆಯಾಗಿರಬೇಕು. ರಾಜತಾಂತ್ರಿಕತೆ ಸಂವಹನವನ್ನು ಆಧಾರವಾಗಿಟ್ಟುಕೊಂಡಿರುವುದಾಗಿದ್ದು ಸರಿಯಾಗಿ ಸಂವಹನ ಮಾಡದಿದ್ದರೆ ಯಾವ ರೀತಿಯ ರಾಜತಾಂತ್ರಿಕತೆ ನಿಮ್ಮಲ್ಲಿದೆ ಹಾಗಾದರೆ ಎಂದು ಪ್ರಶ್ನಿಸಿದರು.

ನೀವು ಯೋಗ ಮಾಡಲು ಧ್ಯಾನ ಏಕೆ ಮಾಡಬಾರದು ಎಂದು ಟ್ರಂಪ್ ನ್ನು ಮೋದಿಯವರು ಕೇಳಿರಬಹುದು, ಅದನ್ನು ಅವರು ಮೀಡಿಯೇಟ್ ಎಂದು ಅರ್ಥ ಮಾಡಿಕೊಂಡಿರಬಹುದು ಎಂದರು.
ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಭಾರತ ಈಗಾಗಲೇ ನಿರಾಕರಿಸಿದೆ. ಪ್ರಧಾನಿ ಮೋದಿ ಅಂತಹ ಯಾವುದೇ ಪ್ರಸ್ತಾಪವನ್ನು ಟ್ರಂಪ್ ಮುಂದಿಟ್ಟಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. 
SCROLL FOR NEXT