ಭಾವನನ್ನು ಮದುವೆಯಾಗಲು ಗರ್ಭಿಣಿ ಅಕ್ಕನನ್ನೇ ಇರಿದು ಕೊಂದಳು! 
ದೇಶ

ಭಾವನನ್ನು ಮದುವೆಯಾಗಲು ಗರ್ಭಿಣಿ ಅಕ್ಕನನ್ನೇ ಇರಿದು ಕೊಂದಳು!

ಭಾವನನ್ನು ಮದುವೆಯಾಗಲು 19 ವರ್ಷದ ಯುವತಿ ಗರ್ಭಿಣಿ ಅಕ್ಕನನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬಲ್ಪುರ: ಭಾವನನ್ನು ಮದುವೆಯಾಗಲು 19 ವರ್ಷದ ಯುವತಿ ಗರ್ಭಿಣಿ ಅಕ್ಕನನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
ಸಾಕ್ಷಿ ಇಂತಹ ದುಸ್ಸಾಹಸಕ್ಕೆ ಕೈಹಾಕಿರುವ ಯುವತಿಯಾಗಿದ್ದು, 7  ತಿಂಗಳ ಗರ್ಭಿಣಿಯಾಗಿದ್ದ ತನ್ನ ಅಕ್ಕ ಅಭಿಲಾಷಾಳನ್ನು ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾಳೆ. 
ಮಧ್ಯಪ್ರದೇಶದ ಜಬಲ್ಪುರದ ಕೈಥಾಲಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಬಾತ್ ರೂಮ್ ನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ. ಅದೆ ಜಾಗದಲ್ಲಿ ಕೃತ್ಯಕ್ಕೆ ಬಳಸಲಾದ ಚಾಕು ಸಹ ಪತ್ತೆಯಾಗಿದೆ. ಹತ್ಯೆ ಆರೋಪಿಯನ್ನು ಬಂಧಿಸಲಾಗಿದೆ. 
ಅಭಿಲಾಷಾಗೆ ಅನಾರೋಗ್ಯ ಉಂಟಾಗಿದ್ದರಿಂದ ಸಾಕ್ಷಿ ಆಕೆಯ ಮನೆಗೆ ತೆರಳಿದ್ದಳು. ಈ ಹಿಂದೆಯೂ ತನ್ನ ಅಕ್ಕನ ಹತ್ಯೆಗೆ ಸಾಕ್ಷಿ ವಿಫಲ ಯತ್ನ ಮಾಡಿದ್ದು ಪ್ರಾಥಮಿಕ ಹಂತದ ವಿಚಾರಣೆಯಿಂದ ಬಹಿರಂಗವಾಗಿದೆ. ಸಾಕ್ಷಿ ತನ್ನ ಭಾವ ಅನ್ಮೋಲ್ ಜೊತೆ ಸಂಬಂಧ ಬೆಳೆಸಿದ್ದಳು. ಈ ವಿಷಯ ಬಹಿರಂಗವಾದಾಗ ಅಭಿಲಾಷಾ ಸಾಕ್ಷಿಗೆ ಎಚ್ಚರಿಕೆ ನೀಡಿದ್ದಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!