ದೇಶ

ರಸ್ತೆ ಮೇಲೆ ಬೇಡ ಟೆರೇಸ್ ಮೇಲೆ ನಮಾಜ್ ಮಾಡಿ!

Srinivas Rao BV
ಅಲೀಘರ್: ರಸ್ತೆ ಮೇಲೆ ಮುಸ್ಲಿಂ ಸಮುದಾಯದವರು ನಮಾಜ್ ಮಾಡುವುದು ವಿವಾದಕ್ಕೆ ಗುರಿಯಾಗಿತ್ತು. ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಲೀಘರ್ ನ ಮುಫ್ತಿ ಮೊಹಮ್ಮದ್ ಖಾಲೀದ್ ರಸ್ತೆ ಮೇಲೆ ನಮಾಜ್ ಮಾಡುವ ಬದಲು ಟೆರೇಸ್ ಮೇಲೆ ನಮಾಜ್ ಮಾಡಿ ಎಂದು ಹೇಳಿದ್ದಾರೆ. 
ಎಲ್ಲಾ ಮಸೀದಿಗಳ ಆಡಳಿತಾಧಿಕಾರಿಗಳಿಗೂ ನಿರ್ದೇಶನ ನೀಡಿರುವ ಅಲೀಘರ್ ಮುಫ್ತಿ ಮೊಹಮ್ಮದ್ ಖಾಲೀದ್ ಹಮೀದ್, ಶುಕ್ರವಾರದ ನಮಾಜ್ ನ್ನು ರಸ್ತೆಗಳ ನಡುವೆ ಆಯೋಜಿಸುವ ಬದಲು ಟೆರೇಸ್ ನಲ್ಲಿ ಆಯೋಜಿಸಬೇಕೆಂದು ಸೂಚನೆ ನೀಡಿದ್ದಾರೆ. 
ರಸ್ತೆ ನಡುವೆ ನಮಾಜ್ ನ್ನು ಪಠಿಸುವುದನ್ನು ವಿರೋಧಿಸುವುದಕ್ಕಾಗಿ ರಸ್ತೆಯಲ್ಲಿಯೇ ಹನುಮಾನ್ ಚಾಲೀಸಾ ಪಠಣ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
SCROLL FOR NEXT