ದೇಶ

ಲೋಕಸಭೆ ಚುನಾವಣೆ: 610 ಪಕ್ಷಗಳು ಯಾವುದೇ ಸ್ಥಾನ ಗೆದ್ದಿಲ್ಲ, 530 ಪಕ್ಷಗಳಿಗೆ 0% ಮತ

Lingaraj Badiger
ನವದೆಹಲಿ: ಇತ್ತೀಚಿಗಷ್ಟೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ 610 ರಾಜಕೀಯ ಪಕ್ಷಗಳು ಪ್ರಮುಖವಾಗಿ ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳು ಒಂದೇ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಿಲ್ಲ ಮತ್ತು 530 ಪಕ್ಷಗಳು ಶೇ. ಶೂನ್ಯ ಮತ ಗಳಿಸಿವೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಈ ಬಾರಿ ಒಟ್ಟು 13 ರಾಜಕೀಯ ಪಕ್ಷಗಳು ತಲಾ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿವೆ.
ಆರ್ ಜೆಡಿ, ಪಿಎಂಕೆ, ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ, ಸರ್ವ ಜನತಾ ಪಾರ್ಟಿ, ರಾಷ್ಟ್ರೀಯ ಲೋಕಸಮತಾ ಪಾರ್ಟಿ, ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್ ಇಂಡಿಯನ್ ನ್ಯಾಷನಲ್ ಲೋಕದಳ ಹಾಗೂ ಜನನಾಯಕ ಜನತಾ ಪಾರ್ಟಿ ಸೇರಿದಂತೆ 610 ಪಕ್ಷಗಳು ಶೂನ್ಯ ಸಾಧನೆ ಮಾಡಿವೆ.
ಈ ಬಾರಿ ಒಟ್ಟು 37 ರಾಜಕೀಯ ಪಕ್ಷಗಳು ಲೋಕಸಭೆ ಪ್ರವೇಶಿಸಿದ್ದು, 542 ಕ್ಷೇತ್ರಗಳ ಪೈಕಿ ಬಿಜೆಪಿ 303 ಸ್ಥಾನಗಳಲ್ಲಿ, ಕಾಂಗ್ರೆಸ್ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
SCROLL FOR NEXT