ದೇಶ

ದೆಹಲಿಯಲ್ಲಿ ದಾಖಲೆ ಬರೆದ ತಾಪಮಾನ, 48 ಡಿಗ್ರಿ ಸೆಲ್ಸಿಯಸ್!

Srinivasamurthy VN
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯಧಿಕ ತಾಪಮಾನಕ್ಕೆ ಜನತೆ ತತ್ತರಿಸಿ ಹೋಗಿದ್ದು, ಸೋಮವಾರ ದಾಖಲೆಯ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದೆಹಲಿಯ ಪಾಲಂ ಪ್ರದೇಶದಲ್ಲಿ ಸೋಮವಾರ 48 ಡಿಗ್ರಿ ಸೆಲ್ಷಿಯಸ್ ತಾಪಮಾನ ತಲುಪಿತ್ತು. ಜೂನ್ ತಿಂಗಳಿನಲ್ಲಿ ದೆಹಲಿಯಲ್ಲಿ ಕಂಡುಬಂದ ದಾಖಲೆ ಉಷ್ಣಾಂಶ ಇದಾಗಿದೆ. ಆದರೆ ಪಾಲಂನಿಂದ 14 ಕಿ.ಮೀ. ದೂರದಲ್ಲಿ ಇರುವ ಸಫ್ದರ್ ಜಂಗ್ ನಲ್ಲಿ 45.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಈ ಹಿಂದೆ ಇದೇ ದೆಹಲಿಯಲ್ಲಿ ಮೇ 31ರಂದು 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಇನ್ನು ಮೇ 26, 1998ರಂದು ದೆಹಲಿಯಲ್ಲಿ ಈ ವರೆಗಿನ ಸಾರ್ವಕಾಲಿಕ ದಾಖಲೆ ಉಷ್ಣಾಂಶ ದಾಖಲಾಗಿತ್ತು. ಅಂದು ಉಷ್ಣಾಂಶ 48.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಇನ್ನು 2016ರ ಮೇ ತಿಂಗಳಲ್ಲಿ ರಾಜಸ್ತಾನದ ಫಲೋಡಿಯಲ್ಲಿ ಸಾರ್ವಕಾಲಿಕ ದಾಖಲೆ ಉಷ್ಣಾಂಶ 51 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. 
ಈ ವರ್ಷದ ಬೇಸಿಗೆಯಲ್ಲಿ ರಾಜಸ್ತಾನದ ಚುರುವಿನಲ್ಲಿ 48 ಡಿಗ್ರಿ ಸೆಲ್ಷಿಯಸ್ ಮತ್ತು ಅದಕ್ಕೆ ಮೀರಿದ ಉಷ್ಣಾಂಶ ದಾಖಲಾಗಿದೆ. ಒಂದು ವಾರದ ಹಿಂದೆ ಜಗತ್ತಿನ ಅತ್ಯಂತ ಉಷ್ಣ ಪ್ರದೇಶ ಎಂದು 15 ಸ್ಥಳಗಳನ್ನು ಹೆಸರಿಸಿದ್ದರೆ, ಅದರಲ್ಲಿ ಭಾರತದ 11 ಸ್ಥಳಗಳು ಇದ್ದವು. ಉಳಿದವು ಪಾಕಿಸ್ತಾನದಲ್ಲಿ ಇದ್ದವು.
SCROLL FOR NEXT