ಸತ್ತ ಮರಿಯನ್ನ ಶವ ಸಂಸ್ಕಾರಕ್ಕೆ ಕೊಂಡೊಯ್ಯುತ್ತಿರುವ ಆನೆಗಳ ಹಿಂಡು: ಮನಕಲಕುವ ವಿಡಿಯೋ ವೈರಲ್!
ಪ್ರಾಣಿಗಳಿಗೂ ಭಾವನೆಯಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ, ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ...
ನವದೆಹಲಿ: ಪ್ರಾಣಿಗಳಿಗೂ ಭಾವನೆಯಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ, ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ಎಂಬುದಕ್ಕೆ ಸಾಕ್ಷಿಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸತ್ತ ಮರಿಯನ್ನು ಆನೆಯೊಂದು ಕಚ್ಚಿಕೊಂಡು ಹೋಗುತ್ತಿದ್ದು, ಅದರ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆನೆಯೊಂದು ಸತ್ತ ಮರಿಯನ್ನು ಕಚ್ಚಿಕೊಂದು ಬರುತ್ತಿದ್ದು, ಮೊದಲಿಗೆ ರಸ್ತೆ ದಾಟುವ ಅದು ಮರಿಯ ಶವವನ್ನು ಅಲ್ಲಿಯೇ ಇರಿಸುತ್ತದೆ. ಕೆಲ ಕ್ಷಣದ ನಂತರ ಮತ್ತೊಂದು ಆನೆ ಬಂದು ಅದಕ್ಕೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡುತ್ತದೆ. ಇದಾದ ನಂತರ ಆನೆಗಳ ಹಿಂದೊಂದು ಅಲ್ಲಿಗೆ ಬರುತ್ತದೆ. ಮತ್ತೆ ಆನೆಗಳೆಲ್ಲ ಸೇರಿ ಆ ಮರಿಯನ್ನು ಹೊತ್ತು, ಕಾಡಿನ ಮತ್ತೊಂದು ದಿಕ್ಕಿಗೆ ಹೋಗುತ್ತವೆ. ಹೀಗೆ ಹೋಗುವ ಆನೆಗಳು ತಮ್ಮೊಂದಿಗೇ ಸತ್ತ ಮರಿಯನ್ನು ಹೊತ್ತುಕೊಂದು ಹೋಗುವ ವಿಡಿಯೋ ಇದಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.