ದೇಶ

ಬಿಹಾರ: ಎನ್ಸಿಫಾಲಿಟಿಸ್ ಸೊಂಕಿಗೆ ಸಾವನ್ನಪ್ಪಿದವರ ಸಂಖ್ಯೆ 73ಕ್ಕೆ ಏರಿಕೆ

Srinivasamurthy VN
ಪಾಟ್ನಾ: ಬಿಹಾರದಲ್ಲಿ 'ಎಇಎಸ್' (Encephalitis) ಸೋಂಕಿನ ಮರಣ ಮೃದಂಗ ಮುಂದುವರೆಸಿದ್ದು, ಇಂದು ಮತ್ತೆ 4 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ವೈರಾಣು ಸೊಂಕಿಗೆ ಬಿಹಾರದಲ್ಲಿ ಈ ವರೆಗೂ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಬಿಹಾರದ ಆರೋಗ್ಯ ಸಚಿವರಾದ ಮಂಗಲ್ ಪಾಂಡೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಎಇಎಸ್ ಸೋಂಕಿಗೆ ಈ ವರೆಗೂ ಬಿಹಾರದಲ್ಲಿ ನಿನ್ನೆಯವರೆಗೂ 69 ಮಂದಿ ಸಾವನ್ನಪ್ಪಿದ್ದರು. ಇಂದು ಮತ್ತೆ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಎನ್ಸಿಫಾಲಿಟಿಸ್ ಸೋಂಕು ನಿಯಂತ್ರಣಕ್ಕೆ ನಾವು ಸಕಲ ರೀತಿಯ ಮುಂಜಾಗ್ರತೆ ಕೈಗೊಂಡಿದ್ದೇವೆ. ಮಕ್ಕಳ ಜೀವ ರಕ್ಷಣೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಪಾಟ್ನಾ ಏಮ್ಸ್ ವೈದ್ಯಕೀಯ ಆಸ್ಪತ್ರೆಯ ನುರಿತ ವೈದ್ಯರು ಮತ್ತು ನರ್ಸ್ ಗಳನ್ನು ಕರೆಸಿಕೊಂಡಿದ್ದೇವೆ. ಎನ್ಸಿಫಾಲಿಟಿಸ್ ಸೋಂಕಿಗೆ ಸಂಬಂಧಿಸಿದಂತೆ ಕೆಲ ನಿಯಮಗಳಿದ್ದು, ಅವುಗಳನ್ನು ನಾವು ಪಾಲಿಸಬೇಕಿದೆ ಎಂದು ಹೇಳಿದ್ದಾರೆ.
2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ.
SCROLL FOR NEXT