ದೇಶ

ಲೋಕಸಭೆ ಸಂಸದರ ಪ್ರಮಾಣ ವಚನ ಸ್ವೀಕಾರ: ಮೋದಿ ಬಿಟ್ಟರೆ ಸ್ಮೃತಿ ಇರಾನಿಗೆ 'ಜೋರು ಚಪ್ಪಾಳೆ'

Nagaraja AB
ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನ ನಿನ್ನೆಯಿಂದ ಆರಂಭವಾಗಿದ್ದು, ನೂತನ ಸಂಸತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದೆ. 
ಮೊದಲ ದಿನ ಅನೇಕ ಸದಸ್ಯರು ಸಂಸ್ಕೃತ, ಹಿಂದಿ, ಇಂಗ್ಲೀಷ್, ಕನ್ನಡ, ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಲೋಕಸಭೆ ಭಾಷಾ ವೈವಿದ್ಯತೆಗೆ ಸಾಕ್ಷಿಯಾಯಿತು.ಸಂಸದರು ತಮ್ಮ ಸಾಂಪ್ರಾದಾಯಿಕ ಉಡುಗೆ ತೊಡುಗೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ಕೆಳಮನೆಯಲ್ಲಿ ಹಬ್ಬದ ವಾತಾವಾರಣ ನಿರ್ಮಾಣವಾಗಿತ್ತು. 
ಲೋಕಸಭೆಯ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮೋದಿ ಮೋದಿ ಎಂಬ ಘೋಷಣೆ ಮೊಳಗಿತು. ಚಪ್ಪಾಳೆಯ ಸುರಿಮಳೆಯಾಯಿತು. 
ಕೇಂದ್ರ ಸಚಿವೆ ಸ್ಮತಿ ಇರಾನಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಜೋರು ಚಪ್ಪಾಳೆಯೊಂದಿಗೆ ಅಭಿನಂದಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಉತ್ಸಾಹದೊಂದಿಗೆ ಮೇಜು ತಟ್ಟುವ ಮೂಲಕ ಸ್ಮೃತಿ ಇರಾನಿಯನ್ನು ಸ್ವಾಗತಿಸಿದರು.
ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸ್ಮೃತಿ ಇರಾನಿ ಅವರನ್ನು ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್  ಅಭಿನಂಧಿಸಿದರು. ನಂತರ ಪ್ರತಿಪಕ್ಷ ಸದಸ್ಯರಾದ  ಸೋನಿಯಾಗಾಂಧಿ, ಪ್ರಮಾಣ ವಚನ ಸ್ವೀಕರಿಸಿದರು. 
SCROLL FOR NEXT