ದೇಶ

ವಾಯುಪಡೆ ವಿಮಾನ ಪತನ ಪ್ರದೇಶದಿಂದ ಆರು ಮೃತದೇಹಗಳು,ಏಳು ಕಳೇಬರ ವಶ

Nagaraja AB
ಗುವಾಹಟಿ:  ಅರುಣಾಚಲ ಪ್ರದೇಶದ  ಸಿಯಾಂಗ್ ಜಿಲ್ಲೆಯಲ್ಲಿ ಜೂನ್ 3 ರಂದು  ನಡೆದಿದ್ದ ವಾಯುಪಡೆಯ ಎಎನ್-32 ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ಏಳು ಯೋಧರ ಕಳೇಬರ ಹಾಗೂ  ಆರು ಮೃತದೇಹಗಳನ್ನು  ವಶಪಡಿಸಿಕೊಳ್ಳಲಾಗಿದೆ. 
ಪಶ್ಚಿಮ ಸಿಯಾಂಗ್  ಜಿಲ್ಲಾ ಕೇಂದ್ರ ಆಲೋನಲ್ಲಿನ  ಭಾರತೀಯ ವಾಯುಪಡೆಯ ಕೇಂದ್ರ ಕಚೇರಿಗೆ ಯೋಧರ  ಕಳೇಬರ  ಹಾಗೂ ಮೃತದೇಹಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ವಿಮಾನ ಅಪಘಾತ ಅವಶೇಷಗಳು ದೊರೆತ ಪ್ರದೇಶದಲ್ಲಿ  ಏಳು ಯೋಧರ ಕಳೇಬರ ಹಾಗೂ ಆರು ಮೃತದೇಹಗಳು ಸೇರಿದಂತೆ ಒಟ್ಟಾರೇ, 13 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಿಲಾಂಗ್ ವಾಯುನೆಲೆಯ  ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಇಂದು ಹೇಳಿದ್ದಾರೆ.
ಜೂನ್ 11 ರಂದು ಅಪಘಾತಗೊಂಡ ವಿಮಾನ ಅವಶೇಷಗಳು ಪತ್ತೆಯಾಗಿತ್ತು. ಜೂನ್ 12 ರಂದು 18 ರಕ್ಷಣಾ ಸಿಬ್ಬಂದಿಯನ್ನೊಳಗೊಂಡ ಎರಡು ತಂಡಗಳು ಅವಶೇಷಗಳು ದೊರೆತ ಸ್ಥಳಕ್ಕೆ ಭೇಟಿ ನೀಡಿದ್ದವು. 20 ಸಿಬ್ಬಂದಿಯನ್ನೊಳಗೊಂಡ ಮೂರನೇ ತಂಡ ಎರಡು ದಿನಗಳ ಹಿಂದಷ್ಟೇ ಈ ಸ್ಥಳಕ್ಕೆ ಭೇಟಿ ನೀಡಿದ್ದಾಗಿ ವಾಯುಪಡೆಯ ಅಧಿಕಾರಿ ಡಿರೊಚಿ ಹೇಳಿದ್ದಾರೆ.
ರಷ್ಯಾ ನಿರ್ಮಿತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಜೂನ್ 3 ರಂದು ಜರ್ಹಾತ್ ವಾಯುನೆಲೆಯಿಂದ ನಾಪತ್ತೆಯಾಗಿತ್ತು. 
SCROLL FOR NEXT