ದೇಶ

ಬಾಲಕೋಟ್ ವೈಮಾನಿಕ ದಾಳಿಗೆ ಐಎಎಫ್ ನೀಡಿದ್ದ ಕೋಡ್ ನೇಮ್ ಏನು ಗೊತ್ತಾ?

Lingaraj Badiger
ನವದೆಹಲಿ: ಫೆಬ್ರವರಿ 26ರಂದು ಭಾರತೀಯ ವಾಯುಪಡೆ(ಐಎಎಫ್) ಪಾಕಿಸ್ತಾನದ ಬಾಲಕೋಟ್ ನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಕಳುಹಿಸಿದ್ದ 12 ಮಿರಜ್ 2000 ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಆಪರೇಷನ್ ಬಂದರ್ ಎಂಬ ಕೋಡ್ ನೇಮ್ ನೀಡಲಾಗಿತ್ತು.
ಕಾರ್ಯಾಚರಣೆಯ ಗೌಪ್ಯತೆ ಕಾಪಾಡುವುದಕ್ಕಾಗಿ ಮತ್ತು ವೈಮಾನಿಕ ದಾಳಿಯ ಮಾಹಿಲಿ ಸೋರಿಕೆಯಾಗದಿರಲಿ ಎಂಬ ಕಾರಣಕ್ಕೆ ಬಾಲಕೋಟ್ ವೈಮಾನಿಕ ದಾಳಿಗೆ ಆಪರೇಷನ್ ಬಂದರ್ ಎಂಬ ಕೋಡ್ ನೇಮ್ ನೀಡಲಾಗಿತ್ತು ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಮಾನಿಕ ದಾಳಿಗೆ ಆಪರೇಷನ್ ಬಂದರ್(ಕೋತಿ) ಹೆಸರೇ ಏಕೆ ಕೊಡಲಾಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಆದರೆ ರಾಮಾಯಣ ಮಹಾಕಾವ್ಯದಲ್ಲಿ ಕಂಡುಬರುವಂತೆ ಕೋತಿಗಳು ಯಾವಾಗಲೂ ಭಾರತದ ಯುದ್ಧ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಅಲ್ಲಿ ಭಗವಾನ್ ರಾಮನ ಲೆಫ್ಟಿನೆಂಟ್ ಭಗವಾನ್ ಹನುಮಾನ್ ಸದ್ದಿಲ್ಲದೆ ಲಂಕಾಗೆ ನುಸುಳಿ, ರಾವಣನ ರಾಜಧಾನಿ ನಾಶಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 24ರಂದು ಭಾರತೀಯ ವಾಯುಪಡೆಯ 12 ಮಿರಜ್ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಶ್-ಇ-ಮೊಹಮ್ಮದ್ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದವು.
SCROLL FOR NEXT