ದೇಶ

'ಶಾಲೆಯಲ್ಲಿ ಮಾತ್ರವಲ್ಲ, ಸಂಸತ್ತಿನಲ್ಲಿಯೂ ಮಕ್ಕಳಿದ್ದಾರೆ': ರಾಹುಲ್ ಕಾಲೆಳೆದ ಬಿಜೆಪಿ ನಾಯಕ ರಾಮ್ ಮಾಧವ್

Sumana Upadhyaya
ನವದೆಹಲಿ: ರಾಷ್ಟ್ರಪತಿ ಭಾಷಣದ ವೇಳೆ ಸದನದಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸಂಸತ್ತಿನಲ್ಲಿ ಮಕ್ಕಳಂತೆ ವರ್ತಿಸುವವರಿಗೆ ಯೋಗ ಸಹಕಾರಿಯಾಗಲಿದೆ ಎಂದು ಅಣಕಿಸಿದ್ದಾರೆ.
ದೆಹಲಿಯಲ್ಲಿ ಇಂದು ಬಿಜೆಪಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಕಾಲೆಳೆದಿದ್ದಾರೆ. ನಿನ್ನೆ ರಾಷ್ಚ್ರಪತಿಯವರು ಜಂಟಿ ಸದನ ಉದ್ದೇಶಿಸಿ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿಯವರು ಮೊಬೈಲ್ ನಲ್ಲಿ ಸರ್ಚ್ ಮಾಡುತ್ತಿದ್ದುದು ಕ್ಯಾಮರಾದಲ್ಲಿ ಸೆರೆಯಾಗಿ ವ್ಯಾಪಕ ವೈರಲ್ ಆಗಿತ್ತು. ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.
ಶಾಲೆಯಲ್ಲಿ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕೆಲವು ಮಕ್ಕಳಿಗೆ ಗಮನ ಹರಿಸಲು ಕಷ್ಟವಾಗುತ್ತದೆ. ಪರೀಕ್ಷೆಗಳಲ್ಲಿ ಓದಲು ಮಕ್ಕಳಿಗೆ ಕಷ್ಟವಾಗುತ್ತದೆ. ಗಮನ ಬೇರೆಲ್ಲೋ ಹೋಗುತ್ತದೆ. ನಿದ್ದೆ ಬರುತ್ತಿರುತ್ತದೆ. ಇವರೆಲ್ಲ ಶಾಲೆಯ ಮಕ್ಕಳು, ಆದರೆ ನಮ್ಮ ಸಂಸತ್ತಿನಲ್ಲಿ ಕೂಡ ಮಕ್ಕಳಿದ್ದಾರೆ, ಅವರಿಗೆ ರಾಷ್ಟ್ರಪತಿಗಳ ಭಾಷಣ ಕೇಳಲು ಕೂಡ ಸಾಧ್ಯವಾಗುವುದಿಲ್ಲ. ಮೊಬೈಲ್ ಫೋನ್ ನಲ್ಲಿ ಮೆಸೇಜ್ ನೋಡುತ್ತಿರುತ್ತಾರೆ, ಏನೋ ಹುಡುಕುತ್ತಿರುತ್ತಾರೆ, ಅಥವಾ ವಿಡಿಯೊ ಗೇಮ್ ಆಡುತ್ತಿರುತ್ತಾರೆ. ಇಂತಹ ಮಕ್ಕಳ ಮನೋವೃತ್ತಿಯವರನ್ನು ನಿಯಂತ್ರಿಸಬೇಕೆಂದರೆ ಯೋಗ ಸಹಕಾರಿಯಾಗಬಹುದು ಎಂದು ರಾಹುಲ್ ಗಾಂಧಿಯನ್ನು ಅವರ ಹೆಸರು ಹೇಳದೆಯೇ ಟೀಕಿಸಿದರು.
SCROLL FOR NEXT