ದೇಶ

ಪ್ರಧಾನಿ ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆಗೆ ಈ ವರೆಗೆ ಕೇವಲ ಶೇ.39 ರಷ್ಟು ಭೂ ಸ್ವಾಧೀನ

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ಟ್ರೈನ್ ಯೋಜನೆಗೆ 1,380 ಹೆಕ್ಟೆರ್ ಗಳಷ್ಟು ಭೂಮಿ ಅಗತ್ಯವಿದ್ದು, ಈ ವರೆಗೂ ಶೇ.39 ರಷ್ಟನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. 
ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರೆಗೂ ಶೇ.39 ರಷ್ಟು ಭೂಮಿಯನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
ಅಹ್ಮದಾಬಾದ್-ಮುಂಬೈ ಮಾರ್ಗದ ಬುಲೆಟ್ ಟ್ರೈನ್ ಯೋಜನೆಗೆ ಮಹಾರಾಷ್ಟ್ರ  ಹಾಗೂ ಗುಜರಾತ್ ನಲ್ಲಿ ಒಟ್ಟಾರೆ 1,387 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಪೈಕಿ 537 ಹೆಕ್ಟೇರ್ ಭೂಮಿಯನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ. ಗುಜರಾತ್ ನಲ್ಲಿ 940 ಹೆಕ್ಟೇರ್ ಭೂಮಿಯ ಪೈಕಿ 471 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ 431 ಹೆಕ್ಟೇರ್ ಭೂಮಿಯ ಪೈಕಿ 66 ಹೆಕ್ಟೇರ್ ನಷ್ಟು ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. 
ಇನ್ನು ದಾದ್ರಾ ನಗರ್ ಹವೇಲಿಯಲ್ಲಿ ಒಟ್ಟಾರೆ 9 ಹೆಕ್ಟೇರ್ ಗಳಷ್ಟು ಭೂಮಿ ಅಗತ್ಯವಿದ್ದು, ಒಂದೇ ಒಂದು ಇಂಚಿನಷ್ಟು ಜಾಗವನ್ನೂ ಸಹ ಸ್ವಾಧೀನಪಡಿಸಿಕೊಳ್ಳಲಾಗಿಲ್ಲ.
SCROLL FOR NEXT