ಜಾರ್ಖಂಡ್: ಜೈ ಶ್ರೀರಾಮ್ ಪಠಣಕ್ಕೆ ಒತ್ತಾಯ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು!
ಜಾರ್ಖಂಡ್: ಕಳ್ಳತನದ ಶಂಕೆ ಮೇಲೆ ಸ್ಥಳೀಯ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಜಾರ್ಖಂಡ್ ನ ಯುವಕ ಸಾವನ್ನಪ್ಪಿದ್ದಾನೆ.
24 ವರ್ಷದ ಶಮ್ಸ್ ತಬ್ರೇಜ್ ಯನ್ನು ಸ್ಥಳೀಯರ ಗುಂಪೊಂದು ಮರಕ್ಕೆ ಕಟ್ಟಿ ಹಾಕಿ ಸುಮಾರು 18 ಗಂಟೆಗಳ ಕಾಲ ಸತತವಾಗಿ ಥಳಿಸಲಾಗಿತ್ತು. ಅಷ್ಟೇ ಅಲ್ಲದೇ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗುವಂತೆ ಒತ್ತಾಯಿಸಲಾಗಿತ್ತು. ಇದಾದ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿತ್ತು.
ತಬ್ರೇಜ್ ನ್ನು ಕಳ್ಳತನದ ಶಂಕೆಯ ಮೇಲೆ ಥಳಿಸಲಾಗಿಲ್ಲ, ಆತನ ಮುಸ್ಲಿಂ ಹೆಸರನ್ನು ನೋಡಿ ಥಳಿಸಲಾಗಿದ್ದು, ಇದು ಕೋಮುದಾಳಿಯಾಗಿದೆ. ಆಸ್ಪತ್ರೆಯಲ್ಲೂ ಆತನನ್ನು ನೋಡುವುದಕ್ಕೆ ನಮಗೆ ಅವಕಾಶ ನೀಡಲಿಲ್ಲ ಎಂದು ಮೃತನ ಸಂಬಂಧಿ ಮಕ್ಸೂದ್ ಆಲಮ್ ಹೇಳಿದ್ದಾರೆ.
ಪೊಲೀಸರು ಘಟನೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಆಲಮ್ ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.