ದೇಶ

ಬಾಲಾಕೋಟ್ ದಾಳಿಯಾದ ನಂತರ ಪಾಕ್ ಎಲ್ಒಸಿ ದಾಟಿಲ್ಲ: ಐಎಎಫ್ ಮುಖ್ಯಸ್ಥ ಧನೋವಾ

Srinivas Rao BV
ಬಾಲಾಕೋಟ್ ಮೇಲೆ ಭಾರತ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಪಾಕಿಸ್ತಾನ ಎಲ್ಒಸಿ ದಾಟಿಲ್ಲ ಎಂದು ವಾಯುಪಡೆ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ. 
ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚುವುದರಿಂದ ತೊಂದರೆ ಇರುವುದು ಅದಕ್ಕೇ ಹೊರತು ಭಾರತಕ್ಕೆ ಸಮಸ್ಯೆ ಇಲ್ಲ. ಭಾರತ- ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರ ಹೊರತಾಗಿಯೂ ಭಾರತದಲ್ಲಿ ನಾಗರಿಕ ವಿಮಾನ ಯಾನ ಸೇವೆಗೆ ಸಮಸ್ಯೆಯಾಗದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು ಎಂದು ಧನೋವಾ ಹೇಳಿದ್ದಾರೆ. 
ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತ ತನ್ನ ಸೇನಾ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು, ಪಾಕಿಸ್ತಾನ ಅದರ ಸೇನಾ ಉದ್ದೇಶವನ್ನು ಈಡೇರಿಸಿಕೊಳ್ಳುವುದರಲ್ಲಿ ವಿಫಲವಾಯಿತು. ಬಾಲಾಕೋಟ್ ನಂತರ ಪಾಕ್ ಎಲ್ ಒಸಿ ದಾಟಿ ನಮ್ಮ ವಾಯು ಪ್ರದೇಶಕ್ಕೆ ಬಂದಿಲ್ಲ ಎಂದು ಧನೋವಾ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. 
SCROLL FOR NEXT