ಭದ್ರತಾ ಪಡೆಗಳು 
ದೇಶ

ಜಮ್ಮು-ಕಾಶ್ಮೀರ: ಟ್ರಾಲ್ ಬಳಿ ಕಾರ್ಯಾಚರಣೆ,ಅನ್ಸಾರ್ ಗಜಾವತುಲ್ ಹಿಂದ್ ಉಗ್ರನ ಹತ್ಯೆ

ಅನ್ಸಾರ್ ಗಜಾವತುಲ್ ಹಿಂದ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಚರಣೆಯಲ್ಲಿ ಹತ್ಯೆ ಮಾಡಲಾಗಿದೆ.

ಶ್ರೀನಗರ : ಅನ್ಸಾರ್ ಗಜಾವತುಲ್ ಹಿಂದ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಚರಣೆಯಲ್ಲಿ ಹತ್ಯೆ ಮಾಡಲಾಗಿದೆ. 
ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರದ ವಿಶೇಷ ಜಂಟಿ ಕಾರ್ಯಾಚರಣೆ ತಂಡ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಬ್ರನ್‌ಪಥೇರಿ, ಟ್ರಾಲ್ ಪ್ರದೇಶಗಳಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿವೆ.ಭದ್ರತಾ ಪಡೆ ನಿರ್ದಿಷ್ಟ ಪ್ರದೇಶದತ್ತ ಪ್ರವೇಶಿಸುತ್ತಿದ್ದಾಗ ಅಡಗಿದ್ದ ಉಗ್ರರು ಹಠಾತ್ ದಾಳಿ ನಡೆಸಿದ್ದು ಭದ್ರತಾ ಪಡೆ  ತಕ್ಕ ಪ್ರತ್ಯುತ್ತರ ನೀಡಿದೆ. 
ಮೃತ ಉಗ್ರನನ್ನು ಟ್ರಾಲ್ ಪ್ರದೇಶದ ನಿವಾಸಿ ಶಬೀರ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...

CM ಡಿಕೆ ಶಿವಕುಮಾರ್ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆ

32 ವರ್ಷಗಳ ಪೊಲೀಸ್ ಶೋಧ ಅಂತ್ಯ; 1994ರ ಡಬಲ್ ಮರ್ಡರ್, ಡಕಾಯಿತಿ ಆರೋಪಿ ಕೊನೆಗೂ ಅರೆಸ್ಟ್! ಬಂಧನವೇ ರೋಚಕ