ದೇಶ

ಅಳ್ವಾರ್ ಹಲ್ಲೆ ಪ್ರಕರಣ: ಮೃತ ಪೆಹ್ಲು ಖಾನ್ ವಿರುದ್ದ ಚಾರ್ಜ್‌ಶೀಟ್ ಸಲ್ಲಿಸಿಲ್ಲ, ವರದಿ ತಪ್ಪು ಎಂದ ರಾಜಸ್ಥಾನ ಸಿಎಂ

Lingaraj Badiger
ಜೈಪುರ್: ಎರಡು ವರ್ಷಗಳ ಹಿಂದೆ ರಾಜಸ್ಥಾನದ ಅಳ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ವಿರುದ್ಧ ಗೋ ಕಳ್ಳಸಾಗಣೆ ಆರೋಪದಡಿ ರಾಜಸ್ಥಾನ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂದು ಶನಿವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಶೋಕ್ ಗೆಹ್ಲೋಟ್ ಅವರು ಪೆಹ್ಲೂ ಖಾನ್ ಹಾಗೂ ಆತನ ಮಕ್ಕಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂಬ ಮಾಧ್ಯಮಗಳ ವರದಿ ತಪ್ಪು ಎಂದು ಹೇಳಿದ್ದಾರ.
ಇದಕ್ಕು ಮುನ್ನ ಈ ಹಿಂದಿನ ಬಿಜೆಪಿ ಸರ್ಕಾರ ಅಳ್ವಾರ್ ಹಲ್ಲೆ ಪ್ರಕರಣದ ತನಿಖೆ ನಡೆಸಿದೆ. ಆದರೆ ತನಿಖೆಯಲ್ಲಿ ಲೋಪದೋಷ ಕಂಡುಬಂದರೆ ಮರು ತನಿಖೆ ನಡೆಸುವುದಾಗಿ ರಾಜಸ್ಥಾನ ಸಿಎಂ ತಿಳಿಸಿದ್ದರು.
ಕಾಂಗ್ರೆಸ್ ಪಕ್ಷ ಪೆಹ್ಲೂ ಖಾನ್ ಹತ್ಯೆಯನ್ನು ಮೊದಲಿನಿಂದಲೂ ಖಂಡಿಸುತ್ತಾ ಬಂದಿದೆ. ಖಾನ್ ಹಂತಕರಿಗೆ ಶಿಕ್ಷೆಯಾಗಲೇಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಕರಣದ ತನಿಖೆ ನಡೆದಿದೆ ಮತ್ತು ಈಗ ಪೆಹ್ಲೂ ಖಾನ್ ಅವರ ಪುತ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಂದು ವೇಳೆ ತನಿಖೆ ಅಸಮಂಜಸವಾಗಿದ್ದರೆ ನಮ್ಮ ಸರ್ಕಾರ ಮರು ತನಿಖೆ ನಡೆಸಲಿದೆ ಎಂದು ರಾಜಸ್ಥಾನ ಸಿಎಂ ವರದಿಗಾರರಿಗೆ ಹೇಳಿದ್ದರು.
ಮೃತ ಪೆಹ್ಲೂ ಖಾನ್ ಮತ್ತು ಆತನ ಇಬ್ಬರು ಗಂಡು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪದಡಿ ರಾಜಸ್ಥಾನ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. 
SCROLL FOR NEXT