ತಮಿಳುನಾಡಿನ ಅಭಿನಂದನ್ ಬಗ್ಗೆ ಪ್ರತಿ ಭಾರತೀಯರಿಗೂ ಹೆಮ್ಮೆ ಇದೆ: ಪ್ರಧಾನಿ ಮೋದಿ
ತಮಿಳುನಾಡಿನ ವೀರಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಪ್ರತಿ ಭಾರತೀಯರಿಗೂ ಹೆಮ್ಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಕನ್ಯಾಕುಮಾರಿ: ತಮಿಳುನಾಡಿನ ವೀರಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಪ್ರತಿ ಭಾರತೀಯನಿಗೂ ಹೆಮ್ಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ತಮಿಳುನಾಡಿನಲ್ಲಿ 40,000 ಕೋಟಿ ರೂ. ಮೊತ್ತದ ಎರಡು ಪ್ರತಿಷ್ಠಿತ ರೈಲು ಯೋಜನೆಗಳು ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ, ಪುಲ್ವಾಮ ಉಗ್ರ ದಾಳಿಗೆ ಬಡ್ಡಿ ಸಮೇತ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದರು.
ಇದೇ ವೇಳೆ ಮಧುರೈ-ಚೆನ್ನೈ ತೇಜಸ್ ಎಕ್ಸ್ಪ್ರೆಸ್ಗೂ ಪ್ರಧಾನಿ ಹಸಿರು ನಿಶಾನೆ ತೋರಿದರು.
ಲ್ವಾಮ ಭಯೋತ್ಪಾದಕ ದಾಳಿ ನಂತರ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಹಾಗೂ ಭಾರತೀಯ ವಾಯುಪಡೆ ಪೈಲಟ್ ನನ್ನು ಪಾಕಿಸ್ತಾನ ಸೆರೆ ಹಿಡಿದಿರುವ ಘಟನೆ ಹಾಗೂ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಪ್ರಧಾನಿ ಇಂದು ತಮಿಳುನಾಡಿನ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ತಮಿಳುನಾಡು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್, ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
208 ಕೋಟಿ ರೂ. ವೆಚ್ಚದ ರಾಮೇಶ್ವರಂ-ಧನುಷ್ಕೋಟಿ ನಡುವಿನ 17.20 ಕಿ.ಮೀ ಉದ್ದದ ರೈಲು ಮಾರ್ಗ ಮರುನಿರ್ಮಾಣ, 2.05 ಕಿ.ಮೀ ಉದ್ದದ 250 ಕೋಟಿ ರೂ.ವೆಚ್ಚದ ಪಂಬನ್ ಸೇತುವೆ ಬಳಿ ಹೊಸ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ, ಚೆನ್ನೈ ಎಗ್ಮೋರ್ ತೇಜಸ್ ಎಕ್ಸ್ಪ್ರೆಸ್ಗೂ ಹಸಿರು ನಿಶಾನೆ ತೋರಿದರು.
1964ರಲ್ಲಿ ಭೀಕರ ಚಂಡಮಾರುತದಿಂದ ರಾಮೇಶ್ವರಂ-ಧನುಷ್ಕೋಟಿ ರೈಲು ಮಾರ್ಗ ಹಾನಿಗೊಂಡಿತ್ತು. ಈ ಮಾರ್ಗ ಮರು ನಿರ್ಮಾಣದಿಂದ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿ ಯಾತ್ರಿಕರನ್ನು ಆಕರ್ಷಿಸುವ ನಿರೀಕ್ಷೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.