ದೇಶ

ಮಿಗ್ ಪಿತಾಮಹಾ ರಷ್ಯಾಗೂ ಅಸಾಧ್ಯವಾಗಿದ್ದನ್ನು ಅಭಿನಂದನ್ ತಮ್ಮ ಸಾಹಸದಿಂದ ಮಾಡಿ ತೋರಿಸಿದ್ದರು!

Srinivasamurthy VN
ನವದೆಹಲಿ: ಭಾರತೀಯ ವಾಯುಸೇನೆಯ ಗಡಿ ದಾಟಿ ಒಳ ನುಸುಳಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟಿಸುವ ಮೂಲಕ ಭಾರತೀಯ ವಾಯುಸೇನೆ ಯೋಧ ಅಭಿನಂದನ್ ತಮ್ಮ ಶೌರ್ಯ ಮೆರೆದಿದ್ದರು. ಆದರೆ ಅಭಿನಂದನ್ ಅವರ ಈ ಸಾಹಸ ಜಗತ್ತಿನ ಘಟಾನುಘಟಿ ಪೈಲಟ್ ಗಳಿಗೂ ಅಚ್ಚರಿ ತರಿಸಿದೆ..
ಹೌದು..ಭಾರತೀಯ ವಿಂಡ್ ಕಮಾಂಡರ್ ಅಭಿನಂದನ್ ಮಾಡಿರೋದು ಜಗತ್ತಿನಲ್ಲೇ ಇದುವರೆಗೂ ಯಾವ ನಿಸ್ಸೀಮ ಪೈಲಟ್ ಗಳಿಂದಲೂ ಸಾಧ್ಯವಾಗಿಲ್ಲದ ಸಾಹಸ. ಹೀಗಾಗಿಯೇ ಅಭಿನಂದನ್ ಕೇವಲ ತಮ್ಮ ಬಿಡುಗಡೆಯಿಂದ ಮಾತ್ರವಲ್ಲ ಬದಲಿಗೆ ತಮ್ಮ ಸಾಹಸದಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಅಭಿನಂದನ್ ಮಾತ್ರರಲ್ಲದೇ ಅವರ ಮಿಗ್ 21 ಬೈಸನ್ ಯುದ್ಧ ವಿಮಾನ ಕೂಡ ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.
ಹಾಗಾದ್ರೆ ಅಭಿನಂದನ್ ಮಾಡಿರೋ ಸಾಹಸ ಎಂಥಾದ್ದು ಗೊತ್ತಾ?
ಮಿಗ್ ಸರಣಿಯ ವಿಮಾನಗಳು ಮೂಲತಃ ರಷ್ಯಾ ನಿರ್ಮಿತ ಜೆಟ್ ಗಳು. ಇವು ಕಳೆದ 50 ವರ್ಷಗಳಿಂದಲೂ ಭಾರತೀಯ ವಾಯುಪಡೆಯಲ್ಲಿ ಕಾರ್ಯಾಚರಿಸುತ್ತಿವೆ. ರಷ್ಯಾ ತಂತ್ರಜ್ಞಾನದ ಇದೇ ವಿಮಾನಗಳನ್ನು ಕಾಲಾನುಕಾಲಕ್ಕೆ ಹೆಚ್ಎಎಲ್‌ ಮೇಲ್ದರ್ಜೆಗೇರಿಸುತ್ತಾ ಬಂದಿದೆ. ಅಂತೆಯೇ 2006ರಲ್ಲೂ ಈ ಮಿಗ್ ಜೆಟ್‌ ಯುದ್ದ ವಿಮಾನಗಳನ್ನು ಹೆಚ್‌ಎಎಲ್‌ನ ವತಿಯಿಂದ ಮೇಲ್ದರ್ಜೆಗೇರಿಸಲಾಗಿತ್ತು. ಆಧುನೀಕರಣಗೊಳಿಸಲಾಗಿರೋ ಈ ವಿಮಾನಗಳನ್ನು ಮಿಗ್‌ 21 ಬೈಸನ್‌ ಎಂದು ಕರೆಯಲಾಗುತ್ತಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಚಲಾಯಿಸ್ತಾ ಇದ್ದಿದ್ದು ಇದೇ ಮಿಗ್‌ 21 ಬೈಸನ್‌ ಯುದ್ಧ ವಿಮಾನ.  ಅಭಿನಂದನ್ ಮತ್ತು ಅವರು ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಯುದ್ಧ ವಿಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯೋದಕ್ಕೆ ಕಾರಣ, ಅವರು ಹೊಡೆದುರುಳಿಸಿದ್ದು ಎಫ್‌-16 ಅನ್ನೋ ಅಮೆರಿಕಾದ ಅತ್ಯಾಧುನಿಕ ಯುದ್ಧ ವಿಮಾನವನ್ನು. ಅದು ಪಾಕಿಸ್ತಾನದ್ದು ಎಂಬ ವಿಚಾರವನ್ನು ಪಕ್ಕಕ್ಕಿಟ್ಟರೆ, ಅಭಿನಂದನ್ ಸುಮಾರು 5 ದಶಕದಷ್ಟು ಹಳೆಯ ಯುದ್ಧ ವಿಮಾನದ ಮೂಲಕ ಇತ್ತೀಚೆಗಿನ ಅತ್ಯಾಧುನಿಕ ಎಫ್-16ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾರೆ. ಇದೇ ಕಾರಣಕ್ಕೆ ಅಭಿನಂದನ್ ಅಂತಾರಾಷ್ಟ್ರೀಯ ನಿಪುಣ ಪೈಲಟ್ ಗಳಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಎಫ್‌ 16 ವಿಮಾನಗಳನ್ನ ಮಿಗ್‌- ಜೆಟ್‌ ಹೊಡೆದುರುಳಿಸಿದ ನಿದರ್ಶನವೇ ಇಲ್ಲ
ಇನ್ನು ಅಮೆರಿಕಾ ನಿರ್ಮಿತ ಎಫ್‌ 16  ವಿಮಾನಗಳನ್ನು ಮಿಗ್ ಸರಣಿಯ ಯಾವುದೇ ಯುದ್ಧ ವಿಮಾನ ಹೊಡೆದುರುಳಿಸಿದ ನಿದರ್ಶನವೇ ಇಲ್ಲ. ಪ್ರಸ್ತುತ ಪಾಕಿಸ್ತಾನ ವಾಯುಪಡೆಯ ಅತಿದೊಡ್ಡ ಶಕ್ತಿ ಎಂದರೆ ಅದು ಈ ಅಮೆರಿಕಾ ನಿರ್ಮಿತ ವಿಮಾನಗಳೇ. ಕಳೆದ 50 ವರ್ಷಗಳ ಇತಿಹಾಸದಲ್ಲಿ ಎಫ್‌16 ವಿಮಾನಗಳು ಜಗತ್ತಿನ ನಾನಾ ಕಡೆ ಮಿಗ್ ಸರಣಿಯ ವಿಮಾನಗಳ ಜೊತೆ ಕಾದಾಡಿವೆ. ಆದರೆ ಪ್ರತಿಬಾರಿಯೂ ಎಫ್‌-16 ವಿಮಾನಗಳು ಮೇಲುಗೈ ಸಾಧಿಸಿದ್ದರೆ, ಮಿಗ್‌ ಸರಣಿಯ ವಿಮಾನಗಳು ಪತನಗೊಂಡಿವೆ. ಅದೇ, ಮಿಗ್ ವಿಮಾನವೊಂದು ಎಫ್‌16 ಅನ್ನು ಹೊಡೆದುರುಳಿಸಿದ ನಿದರ್ಶನವೇ ಇಲ್ಲ. ಮಿಗ್‌ ನ ಪಿತಾಮಹ ರಷ್ಯಾದ ಪೈಲಟ್ ಗಳಿಂದಲೂ ಈ ಸಾಧನೆ ಮಾಡಲಾಗಿಲ್ಲ. ಆದರೆ ಜಗತ್ತಿನ ಯಾವ ಪೈಲಟ್ ಗಳೂ ಮಾಡಲಾರದ ಅಥವಾ ಸಾಧ್ಯವಾಗಿರದಿದ್ದ ಸಾಹಸವನ್ನ ಅಭಿನಂದನ್ ಅವರು ಮಾಡಿದ್ದಾರೆ. 
SCROLL FOR NEXT