ಕೊಲ್ಕತ್ತಾ: ಸಶಸ್ತ್ರ ಪಡೆಗಳು ಮೋದಿ- ಶಾ- ಬಿಜೆಪಿ ಸೇರಿಲ್ಲ, ಭಾರತಕ್ಕೆ ಸೇರಿದ್ದವು ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರೇಯಿನ್ ಬಿಜೆಪಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣದಿಂದ ಬಿಜೆಪಿ ನಾಯಕರು ಹಾಗೂ ಅಮಿತ್ ಶಾ, ವಿಭಜನೆ ಹಾಗೂ ದ್ವೇಷ ಪೂರಿತ ಮಾತುಗಳನ್ನಾಡುತ್ತಿದ್ದಾರೆ. ಅವರ ದೇಶಭಕ್ತಿಯ ಉಪನ್ಯಾಸವನ್ನು ನಾವು ಕೇಳುವುದಿಲ್ಲ, ಸಶಸ್ತ್ರ ಪಡೆಗಳು ಮೋದಿ, ಅಮಿತ್ ಶಾ- ಬಿಜೆಪಿಗೆ ಸೇರಿಲ್ಲ, ಅವುಗಳನ್ನು ಭಾರತ ದೇಶಕ್ಕೆ ಸೇರಿದ್ದವು ಎಂದು ಡೆರೆಕ್ ಒ ಬ್ರೇಯಿನ್ ಟ್ವೀಟ್ ಮಾಡಿದ್ದಾರೆ.
ಮೇ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ಪುಲ್ವಾಮಾ ದಾಳಿಯ ಸಂಚು ರೂಪಿಸಿತ್ತು ಎಂದು ಪ್ರತಿಪಕ್ಷಗಳು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಡೆರೆಕ್ ಒ ಬ್ರೇಯಿನ್ ಈ ರೀತಿ ಹೇಳಿದ್ದಾರೆ.
ಸೇನಾಪಡೆಗಳ ಮೇಲೆ ಅತ್ಯಂತ ಗೌರವವಿದೆ. ಹುತಾತ್ಮ ಯೋಧರ ವಿಚಾರವನ್ನು ರಾಜಕೀಯಗೊಳಿಸಲು ಇಷ್ಟಪಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಇತ್ತೀಚಿಗೆ ಹೇಳಿಕೆ ನೀಡಿದ್ದರು.
ನ್ಯೂಯಾರ್ಕ್ ಟೈಮ್ಸ್ , ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳನ್ನು ಓದಿದ್ದೇನೆ, ಅವುಗಳಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬರೆಯಲಾಗಿದೆ.ಪ್ರತಿಪಕ್ಷದವರಾಗಿ ನಮ್ಮಗೆ ಏರ್ ಸ್ಟ್ರೈಕ್ ಮಾಹಿತಿ ಬೇಕು, ಏಲ್ಲಿ ಬಾಂಬ್ ಹಾಕಲಾಯಿತು? ಎಷ್ಟು ಜನರು ಮೃತಪಟ್ಟರು?