ದೇಶ

ಮಹಾಶಿವರಾತ್ರಿ: ದೇಶಾದ್ಯಂತ ಶಿವ ದೇಗುಲದಲ್ಲಿ ವಿಶೇಷ ಪೂಜೆ

Srinivasamurthy VN
ನವದೆಹಲಿ: ಮಹಾಶಿವರಾತ್ರಿ ನಿಮಿತ್ತ ದೇಶಾದ್ಯಂತ ಶಿವನ ಭಕ್ತರು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.
ದೇಶದ ಪ್ರಮುಖ ಶಿವನ ದೇಗುಲಗಳಾದ ಕರ್ನಾಟಕದ ಗೋಕರ್ಣ, ಶ್ರೀಕ್ಷೇತ್ರ ಧರ್ಮಸ್ಥಳ, ಕದ್ರಿ ಮಂಜುನಾಥ ದೇಗುಲ, ನಂಜನಗೂಡು, ತಮಿಳುನಾಡಿನ ರಾಮೇಶ್ವರಂ, ಓಂಕಾರೇಶ್ವರ ದೇಗುಲ, ಕಂಚಿಯ ಏಕಾಂಬರೇಶ್ವರ ದೇಗುಲ, ಕಾಶಿ ವಿಶ್ವನಾಥ ದೇಗುಲ, ನಾಸಿಕ್ ನಲ್ಲಿರುವ ತ್ರಯಂಬಕೇಶ್ವರ ದೇಗುಲ, ಅರುಣಾಚಲೇಶ್ವರ ದೇಗುಲ ಸೇರಿದಂತ ಹಲವು ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಅಂತೆಯೇ ಭಕ್ತರು ಸಾಲುಗಟ್ಟಿ ಶಿವನ ದರ್ಶನ ಪಡೆಯುತ್ತಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಹೊರತಾಗಿಯೂ ಜಮ್ಮುವಿನ ಶಿವ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತಾದಿಗಳು
ಇನ್ನು ಇಂಡೋ-ಪಾಕ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಇದರ ನಡುವೆಯೇ ಜಮ್ಮುವಿನಲ್ಲಿರುವ ಹಲವು ಶಿವನ ದೇಗುಲಗಳಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಜಮ್ಮುವಿನಲ್ಲಿರುವ ಶಿವ ದೇಗುಲಗಳಲ್ಲಿ ಶಿವನ ಆರಾಧಕರು ಬೆಳಗ್ಗೆಯಿಂದಲೇ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. 
SCROLL FOR NEXT