ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಗಡಿ ದಾಟಿ ಒಳ ಬಂದು ಗೂಢಾಚಾರಿಕೆ ಮಾಡುತ್ತಿದ್ದ ಪಾಕಿಸ್ತಾನದ ಸೇನಾ ಡ್ರೋನ್ ಒಂದನ್ನು ಭಾರತೀಯ ವಾಯುಸೇನೆಯ ಸುಖೋಯ್ ಯುದ್ಧ ವಿಮಾನ ಹೊಡೆದುರುಳಿಸಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವಾರದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ 55ಕ್ಕೂ ಹೆಚ್ಚು ಬಾರಿ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತ ಸಹ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ಮಧ್ಯೆ ರಾಜಸ್ತಾನ ಗಡಿ ಬಳಿ ಪಾಕಿಸ್ತಾನದಿಂದ ಡ್ರೋನ್ ಒಂದು ದೇಶದ ಗಡಿಯೊಳಗೆ ಹಾರಾಟ ನಡೆಸಿತ್ತು. ಇದನ್ನು ಕಂಡ ಸುಖೋಯ್ ಯುದ್ಧ ವಿಮಾನ ಡ್ರೋನ್ ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.