ಸಂಗ್ರಹ ಚಿತ್ರ 
ದೇಶ

ಬಾಲಾಕೋಟ್ ಏರ್‌ಸ್ಟ್ರೈಕ್ 35 ದೇಹಗಳನ್ನು ಸಾಗಿಸಿದ ಪಾಕ್ ಸೇನೆ; ವಿಡಿಯೋ ಸಾಕ್ಷಿ ಕೊಡ್ತೀನಿ?: ಇಟಲಿ ಪರ್ತಕರ್ತೆ

ಬಾಲಾಕೋಟ್ ನಲ್ಲಿನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ನಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಇದೀಗ ಪಾಕ್ ಸುಳ್ಳಾಟಕ್ಕೆ...

ಬಾಲಾಕೋಟ್ ನಲ್ಲಿನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ನಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಆದರೆ ಇದೀಗ ಪಾಕ್ ಸುಳ್ಳಾಟಕ್ಕೆ ಕೆಲವೊಂದು ಪುರಾವೆಗಳು ಸಿಗುತ್ತಿದ್ದು ದಾಳಿ ಸ್ಥಳದಲ್ಲಿ 35ಕ್ಕೂ ಹೆಚ್ಚು ಮೃತದೇಹಗಳನ್ನು ಪಾಕ್ ಸೇನೆ ಸಾಗಿಸಿದ್ದಾಗಿ ಇಟಾಲಿಯನ್ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
ಇಟಾಲಿಯನ್ ಪತ್ರಕರ್ತೆ ಫ್ರಾನ್ಸೆಸ್ಕಾ ಮಾರಿನೋ, ನಾನು ಕಂಡಂತೆ ಸಾವಿನ ಸಂಖ್ಯೆ 40-50ರಷ್ಟಿದೆ. ನಿನ್ನೆ ನನಗೆ ಈ ಕುರಿತಂತೆ ಪುರಾವೆಗಳು ಸಿಕ್ಕಿವೆ. ಇವುಗಳೆಲ್ಲಾ ಶೇಖಡ ನೂರರಷ್ಟು ನಂಬಲರ್ಹ ಮೂಲಗಳಿಂದ ಸಿಕ್ಕಿವೆ ಎಂದು ಹೇಳಿದ್ದಾರೆ.
ಇನ್ನು ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಕುರಿತಂತೆ ಸ್ಥಳೀಯರು ಬಾಯಿಬಿಡದಂತೆ ಒತ್ತಡ ಹೇರಲಾಗಿದ್ದು ಅಲ್ಲಿನ ಸ್ಥಳೀಯರು ಸಹ ಬಹಳ ಭಯಭೀತರಾಗಿದ್ದಾರೆ. ಸಾಕ್ಷಿಗಳನ್ನು ಅಲ್ಲಿಂದ ಹೊರಗೆ ತರುವುದು ಬಹಳ ಕಷ್ಟ. ನನಗೆ ವಿಡಿಯೋ ಸಾಕ್ಷ್ಯಗಳೂ ದೊರಕಲಿವೆ ಎಂದು ಬಹಳ ವಿಶ್ವಾಸವಿದೆ ಎಂದು ಮಾರಿನೋ ಹೇಳಿದ್ದಾರೆ. 
ಏರ್ ಸ್ಟ್ರೈಕ್ ಆದ ಕೂಡಲೇ ನೂರಾರು ಸಂಖ್ಯೆಯಲ್ಲಿ ಬಂದ ಪಾಕಿಸ್ತಾನ ಸೇನೆ ಜಾಗವನ್ನು ಸುತ್ತುವರೆದು ಯಾರೂ ಪ್ರವೇಶಿಸದಂತೆ ವಶಕ್ಕೆ ಪಡೆದುಕೊಂಡಿತ್ತು. ಇನ್ನು ಸ್ಥಳೀಯ ಪೊಲೀಸರಿಗೂ ಅಲ್ಲಿ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ವೈದ್ಯಕೀಯ ನೆರವು ನೀಡಲು ಬಂದಿದ್ದ ವೈದ್ಯರ ಬಳಿಯಿದ್ದ ಮೊಬೈಲ್ ಫೋನ್ ಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಮಾರಿನೋ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ