ದೇಶ

ಬಾಲಾಕೋಟ್ ಏರ್ ಸ್ಟ್ರೈಕ್‌ ಟಾರ್ಗೆಟ್ ಮಿಸ್ ಆಗಿಲ್ಲ; ಭಾರತೀಯ ವಾಯುಸೇನೆ ಕೊಟ್ಟ ಪುರಾವೆ!

Vishwanath S
ನವದೆಹಲಿ: ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಏರ್ ಸ್ಟ್ರೈಕ್ ಕುರಿತು ಪ್ರತಿಪಕ್ಷಗಳು ಸಂಶಯ ವ್ಯಕ್ತಪಡಿಸಿದ್ದು ಇದಕ್ಕೆ ಪುರಾವೆ ನೀಡಿರುವ ಐಎಎಫ್ ಶೇಕಡ 80ರಷ್ಟು ಬಾಂಬ್ ಗಳು ಟಾರ್ಗೆಟ್ ಮೇಲೆ ಬಿದ್ದಿವೆ ಎಂದ ಹೇಳಿದೆ.
ಪಾಕಿಸ್ತಾನದ ರೇಡಾರ್ ಗಳ ದಿಕ್ಕು ತಪ್ಪಿಸಿ ನಮ್ಮ ಮಿರಾಜ್ 2000 ಯುದ್ಧ ವಿಮಾನಗಳು ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿ ವೇಳೆ ಬಾಂಬ್ ಗಳು ಶೇಕಡ 80ರಷ್ಟು ನಿಖರ ಗುರಿಗಳ ಮೇಲೆಯೇ ಬಿದ್ದಿವೆ ಎಂದು ಭಾರತೀಯ ವಾಯುಪಡೆ ಹೇಳಿದೆ.
ಈ ಕುರಿತು ಐಎಎಫ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಸುದೀರ್ಘ ವರದಿಯಲ್ಲಿ ವಾಯುಪಡೆ ಈ ಸ್ಪಷ್ಟನೆ ನೀಡಿದ್ದು ಅದಕ್ಕೆ ಪುರಾವೆಯಾಗಿ ದಾಳಿಯಿಂದ ಚಿಂದಿಯಾಗಿರುವ ಶಿಬಿರಗಳ ಹೈರೆಸಲ್ಯೂಷನ್ ಚಿತ್ರಗಳನ್ನು ಪೂರೈಸಿದೆ. 
ಫೆಬ್ರವರಿ 26ರ ವಾಯುದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳು ಧ್ವಂಸಗೊಂಡಿರುವ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಕರಾರುವಕ್ಕಾದ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಆಗ್ರಹಿಸುತ್ತಿರುವ ಹೊತ್ತಿನಲ್ಲಿಯೇ ವಾಯುಪಡೆ ಈ ವರದಿ ಸಲ್ಲಿಸಿದೆ.
SCROLL FOR NEXT