ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ 
ದೇಶ

ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ

ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.

ಜೈಪುರ: ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.
ಕ್ರಿ.ಶ1141-1236ರ ವರೆಗೆ ಜೀವಿಸಿದ್ದ ಸಂತ ಖ್ವಾಜಾ ಮೊಯಿನುದ್ದೀನ್‍ ಅವರ ದರ್ಗಾಕ್ಕೆ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಖ್ವಿ ಭೇಟಿ ನೀಡಿದರು. ಬುಲಂದ್ ದರ್ವಾಜಾದಲ್ಲಿ ಸಂದೇಶವನ್ನು ಓದಿದ ಸಚಿವರು, ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
 ಮೋದಿಯವರು ತಮ್ಮ ಸಂದೇಶದಲ್ಲಿ, ವಾರ್ಷಿಕ ಉರುಸ್‍ ಅಂಗವಾಗಿ ಖ್ವಾಜ ಮೊಯಿನುದ್ದೀನ್ ಅನುಯಾಯಿಗಳಿಗೆ ಶುಭ ಕೋರಿದ್ದಾರೆ. ವೈವಿಧ್ಯತೆಯಲ್ಲಿ  ಏಕತೆಯು ದೇಶದ ಸೌಂದರ್ಯವಾಗಿದೆ. ನಮ್ಮ ದೇಶದ ಸಂತರು ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಎಲ್ಲ ಕಾಲಕ್ಕೂ ಸಾರಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ಒಬ್ಬ ಸೈನಿಕರಾಗಿದ್ದು, ಸಂತರು ಮತ್ತು ಸೂಫಿಗಳ  ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ ಎಂದು ನಖ್ವಿ ಹೇಳಿದ್ದಾರೆ. 
ನಮ್ಮ ದೇಶ ಭಯೋತ್ಪಾದನೆ ಮುಕ್ತವಾಗಲೆಂಬ ಪ್ರಾರ್ಥನೆಯನ್ನು  ಗರೀಬ್ ನವಾಜ್‍ ಸ್ವೀಕರಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ