ದೇಶ

ಫೇಸ್ ಬುಕ್ ನಲ್ಲಿ ರಾಜಕೀಯ ಜಾಹೀರಾತು; ಬಿಜೆಪಿಯೇ ನಂ.1

Lingaraj Badiger
ನವದೆಹಲಿ: ಸಾಮಾಜಿಕ ಮಾಧ್ಯಮಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಭಾರತದಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಕಳೆದ ತಿಂಗಳು ಫೇಸ್ ಬುಕ್ ಜಾಹೀರಾತಿಗಾಗಿ ಸುಮಾರು 4 ಕೋಟಿ ರುಪಾಯಿ ವೆಚ್ಚ ಮಾಡಿವೆ ಎಂಬುದು ಫೇಸ್ ಬುಕ್ ಆಡ್ ಅರ್ಕೈವ್ ವರದಿ ತಿಳಿಸಿದೆ.
ಫೆಬ್ರವರಿ ತಿಂಗಳಲ್ಲಿ ರಾಜಕೀಯ ಪಕ್ಷಗಳು ಫೇಸ್ ಬುಕ್ ಗೆ ನೀಡಿದ ಜಾಹೀರಾತಿನ ಪೈಕಿ ಬಿಜೆಪಿ ಮತ್ತು ಅದರ ಬೆಂಬಲಿಗರೇ ಶೇ.5ರಷ್ಟು ಜಾಹೀರಾತು ನೀಡಿದ್ದಾರೆ.
ಕಳೆದ ತಿಂಗಳು ಫೇಸ್ ಬುಕ್ ನಲ್ಲಿ ಬಿಜೆಪಿ ಪರವಾದ ಭಾರತ್ ಕೆ ಮನ್ ಕಿ ಬಾತ್ ಗಾಗಿ 1 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.
ಈ ಮಧ್ಯೆ ಪ್ರಾದೇಶಿ ಪಕ್ಷಗಳು ಫೇಸ್ ಬುಕ್ ಜಾಹೀರಾತಿಗಾಗಿ ಬಿಜೆಡಿ, ಎನ್ ಸಿಪಿ ಹಾಗೂ ಟಿಡಿಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು 20 ಲಕ್ಷ ರುಪಾಯಿ ಮತ್ತು ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರು 10 ಲಕ್ಷ ರುಪಾಯಿ ವೆಚ್ಚ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಾರದರ್ಶಕತೆಯ ಭಾಗವಾಗಿ ಫೇಸ್ ಬುಕ್ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದು, ಯಾರು ಬೇಕಾದರೂ ಈ ಮಾಹಿತಿ ಪಡೆದುಕೊಳ್ಳಲು ಅವಕಾಶ ನೀಡಿದೆ.
ಕಸಭಾ ಚುನಾವಣೆ ವೇಳೆ ವಾಟ್ಸಾಅಪ್​, ಫೇಸ್​ಬುಕ್​ ಹಾಗೂ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಚುನಾವಣಾ ಆಯೋಗ ಕೆಲವು ನಿಯಮಗಳನ್ನು ವಿಧಿಸಬೇಕು ಎಂದು ಸಿಎಎಸ್​ಸಿ ಸಂಸ್ಥೆ ಚುನಾವಣಾ ಆಯೋಗಕ್ಕೆ ಲೀಗಲ್​ ನೋಟಿಸ್​​ ನೀಡಿದೆ.
SCROLL FOR NEXT