ದೇಶ

ಸಂಧಾನ ಸಮಿತಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಉತ್ತರ ಪ್ರದೇಶ ಸರ್ಕಾರ ನೀಡಬೇಕು: ಸುಪ್ರೀಂ ಕೋರ್ಟ್

Srinivasamurthy VN
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಮತ್ತು ಅಗತ್ಯತೆಗಳನ್ನು ಉತ್ತರ ಪ್ರದೇಶ ಸರ್ಕಾರವೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಕುರಿತ ತನ್ನ ಅಂತಿಮ ತೀರ್ಪನ್ನು ಶುಕ್ರವಾರ ನೀಡಿರುವ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ. ಸಂಧಾನ ಸಮಿತಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಉತ್ತರ ಪ್ರದೇಶ ಸರ್ಕಾರವೇ ನೀಡಬೇಕು ಎಂದು ಸೂಚನೆ ನೀಡಿದೆ. ಅಲ್ಲದೆ ಸಂಧಾನ ಸಮಿತಿಗೆ ಹೆಚ್ಚುವರಿ ಸದಸ್ಯರ ಅಗತ್ಯಬಿದ್ದರೆ, ಆಗ ಸಂವಿಧಾನಿಕ ಪೀಠದ ಗಮನಕ್ಕೆ ತಂದು ಹೆಚ್ಚುವರಿ ಸಂಧಾನಕಾರರನ್ನು ಸಂಧಾನ ಸಮಿತಿಗೆ ಸೇರಿಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟನೆ ನೀಡಿದೆ.
ಅಲ್ಲದೆ ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆ ವಿವಾಧಿತ ಭೂಮಿ ಇರುವ ಫೈಜಾಬಾದ್ ಬಿಟ್ಟು ಹೊರಗೆ ಬರಬಾರದು ಎಂದು ಹೇಳಿರುವ ಕೋರ್ಟ್ ಅಲ್ಲೇ ಸಮಿತಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಉತ್ತರ ಪ್ರದೇಶ ಸರ್ಕಾರ ನೀಡಬೇಕು ಎಂದು ಹೇಳಿದೆ. 
ಅಂತೆಯೇ ಒಂದು ವೇಳೆ ಸಂಧಾನ ಸಮಿತಿಗೆ ಕಾನೂನಾತ್ಮಕ ಸಲಹೆಗಳ ಅಗತ್ಯವಿದ್ದಾಗ ಖಂಡಿತಾ ಪೀಠದ ಗಮನಕ್ಕೆ ತಂದು, ಗೊಂದಲ ಬಗೆಹರಿಸಿಕೊಳ್ಳಬಹುದು ಎಂದೂ ಪೀಠ ಹೇಳಿದೆ.
SCROLL FOR NEXT