ದೇಶ

ಎಲ್ಲಾ ವಿಮಾನಯಾನ ಸಂಸ್ಥೆಗಳ ತುರ್ತು ಸಭೆ ಕರೆದ ನಾಗರಿಕ ವಿಮಾನಯಾನ ಸಚಿವಾಲಯ

Srinivas Rao BV
ನವದೆಹಲಿ: ಇಥಿಯೋಪಿಯಾದಲ್ಲಿ 157 ಪ್ರಯಾಣಿಕರ ಧಾರುಣ ಸಾವಿಗೆ ಕಾರಣವಾಗಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನ ಪ್ರಕರಣದ ಬೆನ್ನಲ್ಲೇ  ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಭಾರತದ ಎಲ್ಲಾ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದಿದೆ.
ಸಂಜೆ ದೆಹಲಿಯಲ್ಲಿ ಈ ಸಭೆ ನಡೆಯಲಿದ್ದು ತುರ್ತು ಸಭೆಯಲ್ಲಿ ಭಾರತದ ಎಲ್ಲಾ ವಿಮಾನ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ. 
ಭಾರತದ ಹಲವು ವಿಮಾನ ಸಂಸ್ಥೆಗಳು ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳನ್ನು ಬಳಕೆ ಮಾಡುತ್ತಿವೆ. ಸ್ಪೈಸ್ ಜೆಟ್ ಸಂಸ್ಥೆ ಇದೇ ಮಾದರಿಯ12 ವಿಮಾನ ಸಂಸ್ಥೆಗಳನ್ನು ಹೊಂದಿದ್ದು, ಜೆಟ್ ಏರ್ ವೇಸ್ 5 ವಿಮಾನಗಳನ್ನು ಹೊಂದಿವೆ. ಇತ್ತೀಚಿನ ವರದಿಯ ಪ್ರಕಾರ ಈ ಮಾದರಿಯ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 
ಡಿಜಿಸಿಎ ಆದೇಶದ ಮೇರೆಗೆ ನಮ್ಮಲ್ಲಿರುವ ಎಲ್ಲಾ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದೇವೆ, ನಮ್ಮ ಪ್ರಯಾಣಿಕರ ಸಿಬ್ಬಂದಿಗಳ ಭದ್ರತೆ ನಮಗೆ ಮುಖ್ಯ ಎಂದು ಸ್ಪೈಸ್ ಜೆಟ್ ಹೇಳಿಕೆ ಬಿಡುಗಡೆ ಮಾಡಿದೆ. 
ವಿಮಾನಗಳನ್ನು ಸ್ಥಗಿತಗೊಳಿಸುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಸ್ಪೈಸ್ ಜೆಟ್ ಹೇಳಿದೆ. 
SCROLL FOR NEXT