ಪ್ರಧಾನಿ ಮೋದಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ- ರಾಹುಲ್ ಗಾಂಧಿ
ಪ್ರಧಾನ ಮಂತ್ರಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಅದನ್ನು ತೋರಿಸುವ ಸಲುವಾಗಿಯೇ ಸಂಸತ್ತಿನಲ್ಲಿ ಮೋದಿ ಅವರನ್ನು ತಬ್ಬಿಕೊಂಡೆ. ನಂತರ ಅವರು ತುಂಬಾ ಕೋಪದಿಂದ ನನನ್ನು ನೋಡುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಚೆನ್ನೈ: ಪ್ರಧಾನ ಮಂತ್ರಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಅದನ್ನು ತೋರಿಸುವ ಸಲುವಾಗಿಯೇ ಸಂಸತ್ತಿನಲ್ಲಿ ಮೋದಿ ಅವರನ್ನು ತಬ್ಬಿಕೊಂಡೆ. ನಂತರ ಅವರು ತುಂಬಾ ಕೋಪದಿಂದ ನನನ್ನು ನೋಡುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಿಳಾ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಮೋದಿಯನ್ನು ತಬ್ಬಿಕೊಂಡಿದ್ದನ್ನು ನೆನಪಿಕೊಂಡರು. ಪ್ರೀತಿಸದಿದ್ದರೂ ಯಾರನ್ನೂ ದ್ವೇಷಿಸುವುದಿಲ್ಲ, ದೇಶದ ಧಾನ್ಯ, ಪ್ರತಿಯೊಂದು ಧರ್ಮ, ತಮಿಳು ಜನರು ಎಲ್ಲರನ್ನೂ ಪ್ರೀತಿಸುವುದಾಗಿ ಹೇಳಿದರು.
ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಧಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಮೋದಿ ತುಂಬಾ ಕೋಪಗೊಂಡಿರುವುದನ್ನು ಗಮನಿಸಿದೆ. ಆದಾಗ್ಯೂ, ಮನಸ್ಸಿನೊಳಗೆ ಅವರ ಬಗ್ಗೆ ವಿಶೇಷವಾದ ಪ್ರೀತಿ ಇದೆ. ಆದರಿಂದಲೇ ಸಂಸತ್ತಿನಲ್ಲಿ ತನ್ನ ಪ್ರೀತಿಯನ್ನು ತೋರಿಸಿದ್ದೇನೆ ಅವರನ್ನು ನಿಜವಾಗಿಯೂ ಪ್ರೀತಿಸುತ್ತೇನೆ ಎಂದು ಪುನರುಚ್ಚರಿಸಿದಾಗ ವಿದ್ಯಾರ್ಥಿಗಳು ನಗೆಗಡಲಲ್ಲಿ ತೇಲಿದರು.
2014ರಲ್ಲಿ ಕಾಂಗ್ರೆಸ್ ಸೋತಾಗ ತುಂಬಾ ನೋವಾಗಿತ್ತು. ಆದರೆ, ತದನಂತರ ರಾಜಕೀಯ, ಜನರು, ಮನುಷ್ಯತ್ವ ಬಗ್ಗೆ ಅರಿಯಲು ತೊಡಗಿದೆ. ಮೋದಿ ತಮ್ಮ ಮೇಲೆ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೂ ಕೋಪದಲ್ಲಿ ನಾನು ಎಂದಿಗೂ ಪ್ರತಿಕ್ರಿಯಿಸಿಲ್ಲ, ಮೋದಿ ಅವರನ್ನು ದ್ವೇಷಿಸುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.