ಔರಂಗಾಬಾದ್: ದೇಶಾದ್ಯಂತ ಜನಪ್ರಿಯತೆ ಪಡೆದಿದ್ದ ಮೋದಿ ಜಾಕೆಟ್ ಗೆ ಇತ್ತೀಚೆಗೆ ಬೇಡಿಕೆ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಗಾರ್ಮೆಂಟ್ಸ್ ವ್ಯಾಪಾರಿಗಳಿಗೆ ಮೋದಿ ಜಾಕೆಟ್ ಗೆ ಸಿಗುವ ಬೇಡಿಕೆ ಹಠಾತ್ ಕುಸಿದಿದೆ.
ಶರ್ಟ್ ನ ಮೇಲೆ ಅರ್ಧ ತೋಳಿನ ಕೋಟನ್ನು ಮೋದಿ ಜಾಕೆಟ್ ಎಂದು ಕರೆಯಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಬಣ್ಣ ಬಣ್ಣದ ಜಾಕೆಟ್ ಗಳನ್ನು ಧರಿಸುತ್ತಾರೆ.
ಕಳೆದ ಬಾರಿಯ ಲೋಕಸಭೆ ಚುನಾವಣೆ ಮುಗಿದು ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಮೋದಿ ಜಾಕೆಟ್ ಗೆ ಎಷ್ಟು ಬೇಡಿಕೆಯಿತ್ತೆಂದರೆ ಪ್ರತಿದಿನ ನಮ್ಮ ಮಳಿಗೆಯಿಂದ ಸುಮಾರು 35 ಜಾಕೆಟ್ ಗಳು ಮಾರಾಟವಾಗುತ್ತಿದ್ದವು, ಅದೀಗ ವಾರಕ್ಕೆ 35 ಜಾಕೆಟ್ ಗಳು ಮಾರಾಟದ ಮಟ್ಟಕ್ಕೆ ಇಳಿದಿದೆ ಎಂದು ವ್ಯಾಪಾರಿ ಹೇಳುತ್ತಾರೆ.
ಔರಂಗಾಬಾದ್ ನ ಮತ್ತೊಬ್ಬ ಉದ್ಯಮಿ ಗುರುವಿಂದರ್ ಸಿಂಗ್ ಹೇಳುವ ಪ್ರಕಾರ, ಜಿಎಸ್ ಟಿ, ನೋಟುಗಳ ಅನಾಣ್ಯೀಕರಣ ಮತ್ತು ಬರಗಾಲದಂತಹ ಪರಿಸ್ಥಿತಿ ಜಾಕೆಟ್ ಗಳ ಮಾರಾಟದ ಮೇಲೆ ಹೊಡೆತ ಬಿದ್ದಿದೆ ಎನ್ನುತ್ತಾರೆ,
ಗುಲ್ಮಂಡಿ, ತಿಲಕ್ ಪಾತ್, ಔರಂಗಾಪುರ, ಸರಫ, ಒಸ್ಮಾಪುರ ಮತ್ತು ಸಿಡ್ಕೊ ಪ್ರದೇಶದ ಉದ್ಯಮಿಗಳು ಸಹ ಇಂತಹದೇ ಅಭಿಪ್ರಾಯ ಹೇಳುತ್ತಾರೆ.