ದೇಶ

ಕರ್ತಾರ್‌ಪುರ ಕಾರಿಡಾರ್ ಕುರಿತ ಪಾಕಿಸ್ತಾನ ಪ್ರತಿಕ್ರಿಯೆ ನಿರಾಶಾದಾಯಕ: ಅಮರಿಂದರ್ ಸಿಂಗ್

Raghavendra Adiga
ಅಮೃತಸರ್: ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರಕ್ಕೆ ಭಾರತೀಯ ಸಿಖ್ಖರಿಗೆ ವೀಸಾ ರಹಿತ ಪ್ರವೇಶ ಒದಗಿಸಬೇಕೆಂಬ ಭಾರತದ ಬೇಡಿಕೆಗೆ ಪಾಕಿಸ್ತಾನ ನೀಡಿರುವ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ, ಗಡಿರೇಖೆಯ  ಆಚೆಗಿನ ಐತಿಹಾಸಿಕ ಗುರುದ್ವಾರಕ್ಕೆ ತೆರಳುಇ ಪೂಜೆ ಸಲ್ಲಿಸಲು  ಭಕ್ತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಬೇಡಿಕೆಗಳಿಗೆ ಪಾಕ್ ಹೆಚ್ಚು ಉತ್ತೇಜನ ನಿಡಬೇಕಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಗುರುವಾರ ಪಂಜಾಬ್ ವಾಘಾ ಅಟಾರಿ ಗಡಿಯಲ್ಲಿ  ನಡೆದ ಐದು ಗಂಟೆಗಳ ಕಾಲದ ಸಭೆ ಬಳಿಕ  ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್, ಖಲಿಸ್ತಾನಿ ಪ್ರತ್ಯೇಕತಾವಾದಿಗಳು ತಮ್ಮ ಉದ್ದೇಶ ಈಡೇರಿಕೆಗಾಗಿ ಪ್ರಚಾರ ಪಡೆಯಲು ಭಕ್ತರನ್ನು ಗುರಿಯಾಗಿಟ್ಟುಕೊಳ್ಳುವ ಸಾಧ್ಯತೆ ಇದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದರು. "ಅವರು (ಪಾಕಿಸ್ತಾನ) ಕರ್ತಾರ್‌ಪುರ  ಸಾಹಿಬ್ ನಲ್ಲಿರುವ  ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿಕೊಡುವ ಯಾವುದೇ ವ್ಯಕ್ತಿಗೆ ಪ್ರತಿರೋಧ ತೋರಬಾರದು.ನಾವು ಕೇಳಿದ್ದೇವೆ. ಅದಕ್ಕೆ ಪಾಕಿಸ್ತಾನವು ತಮ್ಮ ಮಣ್ಣಿನಲ್ಲಿ ಯಾವುದೇ ದುರ್ವರ್ತನೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದೆ" ಅವರು ಹೇಳಿದರು.
 ಗೃಹ ವ್ಯವಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್.ದಾಸ್ ಮಾತನಾಡಿ ತೀರ್ಥಯಾತ್ರೆಗಳಿಗೆ  ಅನುಕೂಲವಾಗುವಂತೆ ಈ ಮಾರ್ಗವನ್ನು ಮುಕ್ತವಾಗಿಸಬೇಕೆಂದು ನಾವು ಪುನರುಚ್ಚರಿಸಿದ್ದೇವೆ, ಇದು ಪ್ರಸ್ತುತ ವ್ಯವಸ್ಥೆಗಳ ಭಾಗವಲ್ಲ, ಆದರೆ ಈ ಸಮಯದಲ್ಲಿ ಈ ದಾರಿ ಅತ್ಯಂತ ಮುಖ್ಯವಾಗಿದ್ದು ಎನ್ನುವುದನ್ನು ಪಾಕಿಸ್ತಾನಕ್ಕೆ ನಾವು ಮನದಟ್ಟು ಮಾಡಿಸಿದ್ದೇವೆ. ಎಂದಿದ್ದಾರೆ.
ಖಲಿಸ್ತಾನ್ ಪ್ರತ್ಯೇಕತಾವಾದಿ ಗುಂಪುಗಳು ಭಯೋತ್ಪಾದಕರನ್ನು ಭಾರತದೊಳಕ್ಕೆ ಕರೆತರಲು ಈ ಮಾರ್ಗವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದೆ.
ಇದಕ್ಕಾಗಿಯೇ ಭಾರತವು ನಿನ್ನೆನ ಸಭೆಯಲ್ಲಿ ಖಲೀಸ್ಥಾನ್ ಪ್ರತ್ಯೇಕತಾವಾದಿ ಚಳವಳಿಗಾರರಿಗೆ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸಸಲಿಉಕ್ಕಾಗಿ ಪಾಕ್ ಅವಕಾಶ ನಿಡಬಾರದೆಂದು  ಭಾರತ ಒತ್ತಾಯಿಸಿದೆ.  ಭಾರ ವಿರೋಧಿ ಪ್ರಚಾರಕ್ಕಾಗಿ ಈ ಮಾರ್ಗದಲ್ಲಿ ಪ್ರತ್ಯೇಕತಾವಾದಿಗಳಿಗೆ ಯಾವ ಕಾರಣಕ್ಕೆ ಅವಕಾಅ ಕಲ್ಪಿಸಬಾರದೆಂದು ಅದು ಪಾಕ್ ಗೆ ಎಚ್ಚರಿಸಿದೆ.
SCROLL FOR NEXT