ದೇಶ

ಬಿಜೆಪಿ ಒಂದು ಮಾರ್ಕೆಟಿಂಗ್ ಕಂಪನಿ: ಪಕ್ಷ ತೊರೆದ ರೇಷ್ಮಾ ಪಟೇಲ್

Shilpa D
ಗಾಂಧಿನಗರ: ಬಿಜೆಪಿ ಒಂದು ಮಾರ್ಕೆಟಿಂಗ್‌ ಕಂಪೆನಿಯೇ ಹೊರತು ಬೇರೇನೂ ಅಲ್ಲ ಎಂದು ಹೇಳುವ ಮೂಲಕ ರೇಷ್ಮಾ  ಪಟೇಲ್‌ ಬಿಜೆಪಿ ತೊರೆದಿದ್ದಾರೆ. 
ಗುಜರಾತ್‌ನಲ್ಲಿ ಪಟೇಲ್‌ ಆಂದೋಲನಕ್ಕೆ ಎರಡೂವರೆ ವರ್ಷ ಕಾಲ ಮಹಿಳಾ ಮುಖಂಡೆಯಾಗಿದ್ದ ರೇಷ್ಮಾ  ಪಟೇಲ್‌ ಅವರು ಕೆಲ ಸಮಯದ ಹಿಂದೆ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿ ಕೇವಲ ಭರವಸೆ ಕೊಡುವ ಪಕ್ಷವಾಗಿ ನನಗೆ ಭ್ರಮನಿರಸನ ಉಂಟಾಗಿದೆ, ನಾನು ಪೋರಬಂದರು ಲೋಕಸಕ್ಷೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ, ಹೀಗಾಗಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಒಂದೇ ವೇದಿಕೆಯಲ್ಲಿ ಸೇರಬೇಕು, ನನಗೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ತಮಗೆ ವಿರೋಧ ಪಕ್ಷಗಳು ನನಗೆ ಅವಕಾಶ ನೀಡದಿದ್ದರೇ, ಪೋರಬಂದರು ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
SCROLL FOR NEXT