ಲಖನೌ: ನಾನು ಪ್ರಧಾನಿಯನ್ನು ಎಂದಿಗೂ ಕಾವಲುಗಾರ ಕಳ್ಳ ಎಂದು ಹೇಳಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್, ಎಸ್ ಪಿ-ಬಿಎಸ್ ಪಿ ನಡುವಿನ ಮೈತ್ರಿ ಕೇವಲ ಮೋದಿಯನ್ನು ಅಧಿಕಾರದಿಂದ ದೂರವಿಡಲಿದೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅಖಿಲೇಶ್ ಯಾದವ್, ನಾನು ಪ್ರಧಾನಿಯನ್ನು ಕಾವಲುಗಾರ ಕಳ್ಳ ಎಂದು ಹೇಳಿಲ್ಲ. ಆದರೆ ಜಗತ್ತಿನ ಅತಿ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷದ ಸಂಸದ ಶಾಸಕನನ್ನು ಶೂ ನಲ್ಲಿ ಹೊಡೆಯುತ್ತಾರೆ. ಮೋದಿ ತಮ್ಮನ್ನು ಚೌಕಿದಾರ ಎಂದು ಹೇಳಿಕೊಳ್ಳುತ್ತಾರೆ. ದೇಶವನ್ನು ಭ್ರಷ್ಟಾಚಾರ ಹಾಗೂ ಬಾಹ್ಯ ಅಪಾಯಗಳಿಂದ ಯಾರು ರಕ್ಷಿಸುತ್ತಾರೆ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.