ದೇಶ

ಜನರ ಹೋರಾಟ, ಸುಪ್ರೀಂ ಒತ್ತಡಕ್ಕೆ ಮಣಿದು ಲೋಕಪಾಲ್ ನೇಮಕ: ಅಣ್ಣಾ ಹಜಾರೆ

Raghavendra Adiga
ರಾಳೆಗಂಜ್ ಸಿದ್ದಿ(ಮಹಾರಾಷ್ಟ್ರ): ಸಾರ್ವಜನಿಕರ ಒತ್ತಡ, ಸುಪ್ರೀಂ ಕೋರ್ಟ್ ಒತ್ತಡಗಳಿಂದ ಕೇಂದ್ರ ಸರ್ಕಾರ "ಬಲವಂತವಾಗಿ" ಲೋಕಸಪಾಲ್ ನೇಮಕಕ್ಕೆ ತಿರ್ಮಾನಿಸಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಲೋಕಪಾಲ್ ಆಯ್ಕೆ ಸಮಿತಿ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧಿಶರ ಹೆಸರನ್ನು ಭಾರತದ ಪ್ರಥಮ ಲೋಕಪಾಲ್ಹುದ್ದೆಗೆ ಸೂಚಿಸಿದ ಬಳಿಕ  ಅಣ್ಣಾ ಹಜಾರೆ ಪ್ರತಿಕ್ರಯಿಸಿದ್ದಾರೆ. 
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಹಿರಿಯ ವಕೀಲ ಮುಕುಲ್ ರೋಹಟಗಿ ಒಳಗೊಂಡಿದ್ದ ಆಯ್ಕೆ ಸಮಿತಿಯ ಸಭೆಯಲ್ಲಿ ಜಸ್ಟಿಸ್ ಪಿಸಿ ಘೋಷ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
"ಜನಸಾಮಾನ್ಯರು ಲೋಕಪಾಲ್ ನೇಮಕಕ್ಕಾಗಿ ನಡೆಸಿದ ಹೋರಾಟ, ಸುಪ್ರೀಂ ಕೋರ್ಟ್ ಒಡ್ಡಿದ ಒತ್ತಡ ಇವುಗಳಿಂದ ಸರ್ಕಾರ ಅಂತಿಮವಾಗಿ ಲೋಕಪಾಲ್ ನೇಮಕಕ್ಕೆ ಮುಂದಾಗಿದೆ." ಅಣ್ಣಾ ಹಜಾರೆ  ಎ ಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
"ಸತತ ಒಂಬತ್ತು ವರ್ಷಗಳ ಕಾಲದ ಹೋರಾಟದ ಬಳಿಕ ಲೋಕಪಾಲ್ ನೇಮಕ ಮಾಡಲಾಗುತ್ತಿದೆ. ಜನರ ಹೋರಾಟದ ಶಕ್ತಿ ಹೇಗಿದೆ ಎನ್ನುವುದ್ ಈಗ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್ ಎಷ್ಟು ಶಕ್ತಿಯುತವಾಗಿದೆ ಎನ್ನುವುದ್ ಈಗ ತಿಳಿಯುತ್ತಿದೆ.
"ಉನ್ನತ ಸ್ಥಾನದಲ್ಲಿರುವವರ ಭ್ರಷ್ಟಾಚಾರಗಳನ್ನು ತಡೆಯಲು ಲೋಕಪಾಲ್ ನೇಮಕ ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಬಹಳ ಹಿಂದೆಯೇ ಹೇಳಿದೆ." ಹಜಾರೆ ಹೇಳಿದ್ದಾರೆ.
 ಜನವರಿ 30ರಿಂದ ಲೋಕಪಾಲ್ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧುಇ ಉಪವಾಸ ಸತ್ಯಾಗ್ರಹ ಕು:ಇತಿದ್ದ ಹಜಾರೆ ಲೋಕಪಾಲ್ ಹಾಗೂ ಲೋಕಾಯುಕ್ತ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದರು.
SCROLL FOR NEXT