ದೇಶ

ಮನೋಹರ್ ಪರ್ರಿಕರ್ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ

Sumana Upadhyaya
ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಂತಾಪ ಸೂಚಿಸಿತು. ಪರ್ರಿಕರ್ ಅವರ ಸರಳತೆ ಮತ್ತು ಆಡಳಿತ ಶೈಲಿಯಿಂದ ಅವರು ಸದಾ ನೆನಪಿನಲ್ಲಿಳಿಯುವ ರಾಜಕಾರಣಿ ಎಂದು ಕೊಂಡಾಡಿದ ಸಂಪುಟ ಸದಸ್ಯರು ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿ ನಿರ್ಣಯವೊಂದನ್ನು ಹೊರಡಿಸಿತು. ಅದರಲ್ಲಿ ದೇಶ ಒಬ್ಬ ಅಭೂತಪೂರ್ವ ಆಡಳಿತಗಾರನನ್ನು ಕಳೆದುಕೊಂಡಿದೆ.
ಅವರನ್ನು ಪ್ರೀತಿಯಿಂದ ಸಾಮಾನ್ಯರ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಕೇಂದ್ರ ಸಚಿವ ಸಂಪುಟ ಸದಸ್ಯರು ಹೊರಡಿಸಿದ ನಿರ್ಣಯದಲ್ಲಿ, ಪರ್ರಿಕರ್ ಅವರ ಸರಳತೆ ಮತ್ತು ಅದ್ವಿತೀಯ ಆಡಳಿತ ಎಲ್ಲರಿಗೂ ಮಾದರಿಯಾದದ್ದು. ಆಧುನಿಕ ಗೋವಾ ನಿರ್ಮಾಣದಲ್ಲಿ ಮತ್ತು ಭಾರತೀಯ ಸೇನಾ ಪಡೆಯ ಆಧುನೀಕರಣಕ್ಕೆ ಹಾಗೂ ಮಾಜಿ ಸೈನಿಕರ ಜೀವನ ಮಟ್ಟ ಸುಧಾರಣೆಗೆ ಅವರ ಸೇವೆ ಅಪಾರ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
SCROLL FOR NEXT