ಹಾರ್ದಿಕ್ ಪಟೇಲ್ 
ದೇಶ

'ಬೆರೋಜ್ಗರ್' ಟ್ವಿಟರ್ ಖಾತೆ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್, ಚೌಕಿದಾರ್ ಮೋದಿಗೆ ಟಾಂಗ್!

ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.

ಅಹಮದಾಬಾದ್:  ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಗುಜರಾತಿನ ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್,  ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ  ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.

 ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ ಹಾರ್ದಿಕ್ ಪಟೇಲ್ 'ಎಂದು ಬದಲಾಯಿಸಿಕೊಂಡಿದ್ದಾರೆ. ಬೇರೊಜ್ಗರ್ ಎಂದರೆ ನಿರುದ್ಯೋಗಿ ಎಂದರ್ಥ.

ಪ್ರತಿಪಕ್ಷಗಳ ಚೌಕಿದಾರ್ ಚೋರ್ ಹೈ ಟೀಕೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ' ಮೈನ್ ಬೀ ಚೌಕಿದಾರ್' ಎಂದು ಟ್ವಿಟರ್ ಖಾತೆಯನ್ನು ಬದಲಾಯಿಸಿಕೊಂಡಿದ್ದರು.

ಬಿಜೆಪಿ ಸಮಾವೇಶಗಳಲ್ಲಿ ತಮ್ಮನ್ನು ದೇಶ ಕಾಯುವ ಕಾವಲುಗಾರ ಎಂದು ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದರು. ಮೈನ್ ಬೀ ಪ್ರಚಾರಾಂದೋಲನದಲ್ಲಿ  ಬಿಜೆಪಿ ನಾಯಕರು, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ಎಂದು  ಸೇರ್ಪಡೆ ಮಾಡಿಕೊಂಡಿದ್ದರು.

ಈಗ ಇದಕ್ಕೆ ಟಾಂಗ್ ನೀಡುವ ನಿಟ್ಟಿನಲ್ಲಿ ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆರೋಜ್ಗರ್  ಪ್ರಚಾರಾಂದೋಲನ ಆರಂಭಿಸಿದ್ದಾರೆ..
ಅನೇಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಟ್ವಿಟರ್ ನಲ್ಲಿ ಬೆರೋಜ್ಗರ್ ಎಂದು ಬದಲಾಯಿಸಿಕೊಂಡಿರುವುದಾಗಿ ಗುಜರಾತ್ ಕಾಂಗ್ರೆಸ್ ಐಟಿ ಘಟಕದ ಉಪಾಧ್ಯಕ್ಷ ಹಿರೇನ್ ಬ್ಯಾಂಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT