ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!
ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ.
ಥಾರ್: ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ.
ಚೀನಾ ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಗೆ ಹೂಡಿಕೆ ಮಾಡಿದೆ. ಪುಲ್ವಾಮ ದಾಳಿಯ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದು ಈಗ ಚೀನಾಗೆ ತಲೆನೋವಾಗಿ ಪರಿಣಮಿಸಿದೆ. ಈ ಬೆನ್ನಲ್ಲೇ ಸಿಪಿಇಸಿ ರಕ್ಷಣೆಗಾಗಿ ಚೀನಾ ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿಂಧ್ ಪ್ರಾಂತ್ಯದ ಥಾರ್ ಕಲ್ಲಿದ್ದಲು ಗಣಿ ಇದ್ದು, ಈ ಪ್ರದೇಶ ಭಾರತ-ಪಾಕಿಸ್ತಾನದ ಗಡಿಯಿಂದ ಕೇವಲ 90 ಕಿ.ಮೀ ದೂರದಲ್ಲಿದೆ. ಸಿಂಧ್ ಪ್ರಾಂತ್ಯದಲ್ಲಿ ಸಿಪಿಇಸಿ ಯೋಜನೆಯಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗೆ ಸ್ಥಳೀಯರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತ-ಪಾಕಿಸ್ತಾನದ ಪ್ರಾಂತ್ಯದಲ್ಲಿ ನಿಯೋಜನೆಯಾಗಿರುವ ಪಡೆಗಳು ಚೀನಾ ಸಿಬ್ಬಂದಿಗಳ ಚಲನವಲನಗಳನ್ನು ಗಮನಿಸುತ್ತಿದೆ.
ಸಿಪಿಇಸಿ ಯೋಜನೆಯ ಕಾವಲಿಗಾಗಿ ಪಾಕಿಸ್ತಾನ ಈಗಾಗಲೇ 17,000 ಸಿಬ್ಬಂದಿಗಳ ನ್ನು ನಿಯೋಜನೆ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.