ದೇಶ

ಹೆಸರಿನ ಹಿಂದೆ ಚೌಕಿದಾರ್ ಸೇರಿಸಿಕೊಳ್ಳಲು ನಾನು ತಯಾರಿಲ್ಲ: ಸುಬ್ರಹ್ಮಣಿಯನ್ ಸ್ವಾಮಿ; ಕಾರಣ ಗೊತ್ತೇ?

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದ ಚೌಕೀದಾರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಅವರ ಅನೇಕ ಅನುಯಾಯಿಗಳು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೆಸರಿನ ಹಿಂದೆ ಚೌಕೀದಾರ್ ಪದವನ್ನು ಸೇರಿಸಿಕೊಂಡಿದ್ದಾರೆ. 
ಆದರೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಮಾತ್ರ ತಾವು ತಮ್ಮ ಹೆಸರಿನ ಹಿಂದೆ ಚೌಕೀದಾರ್ ಸೇರಿಸಿಕೊಳ್ಳುವುದಕ್ಕೆ ತಯಾರಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. 
ತಮಿಳು ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಕಾರಣವನ್ನು ಬಹಿರಂಗಪಡಿಸಿದ್ದು, "ನಾನು ಬ್ರಾಹ್ಮಣ ಹಾಗಾಗಿ ನನ್ನನ್ನು ನಾನು ಕಾವಲುಗಾರ ಎನ್ನಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆಗತೊಡಗಿದೆ. 
"ನಾನು ಚೌಕೀದಾರ (ಕಾವಲುಗಾರನಾಗಿರಲು) ಸಾಧ್ಯವಿಲ್ಲ ಏಕೆಂದರೆ ನಾನು ಬ್ರಾಹ್ಮಣ, ಬ್ರಾಹ್ಮಣರು ಕಾವಲುಗಾರರಾಗಿರಲು ಸಾಧ್ಯವಿಲ್ಲ. ಇದು ವಾಸ್ತವಾಂಶ. ನಾನು ಚೌಕೀದಾರರು ಕಾರ್ಯಗತಗೊಳಿಸಬೇಕಾಗಿರುವುದನ್ನು ಆದೇಶಿಸುತ್ತೇನೆ. ಅದನ್ನೇ ನೇಮಕಗೊಂಡ ಚೌಕೀದಾರನಿಂದ ಎಲ್ಲರೂ ನಿರೀಕ್ಷಿಸುವುದು, ನಾನು ಆ ರೀತಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. 
SCROLL FOR NEXT