ಸುಡಿನ್ ಧವಳಿಕಾರ್ 
ದೇಶ

ಗೋವಾ: ಸಾವಂತ್ ಸಂಪುಟದಿಂದ ಉಪ ಮುಖ್ಯಮಂತ್ರಿ ಧವಳಿಕರ್ ವಜಾ

ಮಹತ್ವದ ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು...

ಪಣಜಿ: ಮಹತ್ವದ ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು ಉಪಮುಖ್ಯಮಂತ್ರಿ ಸುಡಿನ್ ಧವಳಿಕರ್ ಅವರನ್ನು ತಮ್ಮ ಸಂಪುಟದಿಂದ ಮಂಗಳವಾರ ವಜಾ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದೆಯಷ್ಟೆ ಅವರು ಸಂಪಟಕ್ಕೆ ಸೇರಿದ್ದರು.
ಮುಖ್ಯಮಂತ್ರಿಯ ಶಿಫಾರಸ್ಸಿನ ಮೇರೆಗೆ ಧವಳಿಕಾರ್ ಅವರನ್ನು ರಾಜ್ಯಪಾಲ ಮೃದುಲಾ ಸಿನ್ಹಾ  ಸಂಪುಟದಿಂದ ತೆಗೆದುಹಾಕಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಧವಳಿಕಾರ್, ಎಂಜಿಪಿ ಮೇಲೆ ಚೌಕಿದಾರರುಗಳು ದೌರ್ಜನ್ಯ ಮಾಡಿದ್ದಾರೆ. ಇದಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿ ಕುತಂತ್ರ ರಾಜಕಾರಣ ಮಾಡಿ ಗೋವಾ ಜನರಿಗೆ ಆಘಾತ ಉಂಟು ಮಾಡಿದೆ. ಇದಕ್ಕೆ ಅದು ತಕ್ಕ ಬೆಲೆ ತೆರಬೇಕು. ಜನತೆ ಎಲ್ಲವನ್ನು ನೋಡುತ್ತಿದ್ದಾರೆ ಎಂದರು. ಎಂ.ಜಿ.ಪಿ ಯ ಮೂವರು  ಶಾಸಕರಲ್ಲಿ ಇಬ್ಬರು ಇಂದು ಪಕ್ಷದಿಂದ ಬೇರೆಯಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.
ಮನೋಹರ್ ಅಜ್ಗಾಂಕರ್ ಮಂತ್ರಿಯಾಗಿದ್ದಾರೆ. ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಜಿಎಸ್ಐಡಿಸಿ) ಅಧ್ಯಕ್ಷರಾಗಿರುವ  ದೀಪಕ್ ಪೌಸ್ಕರ್ ಅವರು ಪ್ರಮೋದ್ ಸಾವಂತ್ ಸಂಪುಟಕ್ಕೆ ಸಂಜೆ ಸೇರಲಿದ್ದಾರೆ ಎಂದು ಹೇಳಲಾಗಿದೆ. ಇದು ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು  ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT