ನವದೆಹಲಿ: ಗಾಯಗೊಂಡಿದ್ದ ಪತ್ರಕರ್ತನೋರ್ವನನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉಪಚರಿಸಿದ್ದು ಅಲ್ಲದೆ ತಮ್ಮ ಕಾರಿನಲ್ಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ರಾಜಸ್ತಾನ ಮೂಲದ ದಿನಪತ್ರಿಕೆಯ ಸಂಪಾದಕ ರಾಜೇಂದ್ರ ವ್ಯಾಸ್ ಎಂಬ ಪತ್ರಕರ್ತ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಹೊರಟಿದ್ದ ರಾಹುಲ್ ಗಾಂಧಿ ತಮ್ಮ ಕಾರನ್ನು ನಿಲ್ಲಿಸಿ ಪತ್ರಕರ್ತರನ್ನು ಉಪಚರಿಸಿದ್ದಾರೆ.
ಪತ್ರಕರ್ತನ ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದು ಅದನ್ನು ರಾಹುಲ್ ತಮ್ಮ ಕರವಸ್ತ್ರದಿಂದ ಒರೆಸಿದ್ದಾರೆ. ಆಗ ಪತ್ರಕರ್ತ ಸರ್ ಇನ್ನೊಮ್ಮೆ ಕರವಸ್ತ್ರದಿಂದ ಹಣೆ ಒರೆಸಿ, ನಾನು ಇದನ್ನು ನನ್ನ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ರಾಹುಲ್ ಗಾಂಧಿ ಪತ್ರಕರ್ತನನ್ನು ಏಮ್ಸ್ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ರಾಹುಲ್ ಪ್ರಯಾಣ ಬೆಳೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics