ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ: ಸಿಎಂ ಪಟ್ನಾಯಕ್
ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ.
ಭುವನೇಶ್ವರ್: ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ.
ಒಡಿಶಾದ ಪುರಿಗೆ ಬೆಳಿಗ್ಗೆ 8 ಗಂಟೆಗೆ ಅಪ್ಪಳಿಸಿದ ಚಂಡಮಾರುತದಿಂದ ಅವಘಡಗಳು ಸಂಭವಿಸಿದ್ದು, ಮನೆಗಳು, ಗುಡಿಸಲುಗಳು ಕೊಚ್ಚಿಹೋಗಿವೆ.
ಫೋನಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 3 ರಿಂದ 8 ಕ್ಕೆ ಏರಿಕೆಯಾಗಿದೆ.
ಪುರಿ ಜಿಲ್ಲೆಯಲ್ಲಿ 3, ಭುವನೇಶ್ವರ್ ಪ್ರದೇಶದಲ್ಲಿ 3 ಕೇಂದ್ರಪಾರ ಪ್ರದೇಶದಲ್ಲಿ ಪುನರ್ವಸತಿ ಕೇಂದ್ರದಲ್ಲಿ ಓರ್ವ ಹಿರಿಯ ಮಹಿಳೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪುರಿಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಂಧನ ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ, ವಿದ್ಯುತ್ ಸರಬರಾಜು ಸವಾಲಿನ ಸಂಗತಿಗಳಾಗಿದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.