ದೇಶ

ದಯಮಾಡಿ ಬಿಟ್ಟುಬಿಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಪತ್ನಿ ಪೋನಿ ಮನವಿ!

Vishwanath S
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ, ಖಳನಟ ಪ್ರಕಾಶ್ ರೈ ಅವರ ಪತ್ನಿ ದಯಮಾಡಿ ಬಿಟ್ಟುಬಿಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ-ನಟಿಯರನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ವೀಟ್ ಮಾಡಿದ್ದಾರೆ. 
ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತ್ತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೋನಿ ಪ್ರಧಾನಿಗೆ ಟ್ವೀಟ್ ಮಾಡಿ ದಯವಿಟ್ಟು ಚಿತ್ರೋದ್ಯಮದವರನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.
ಪೋನಿ ಅವರು ತಮ್ಮ ಟ್ವೀಟ್ ನಲ್ಲಿ ಮಿಸ್ಟರ್ ಪಿಎಂ ದಯಮಾಡಿ ನಮ್ಮ ಚಿತ್ರರಂಗದವರನ್ನು ಬಿಟ್ಟುಬಿಡಿ. ನಿಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ. ನನಗೆ ಅವರ ಪರಿಸ್ಥಿತಿ ಅರ್ಥವಾಗುತ್ತದೆ. ಅವರಿಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುವಂತಹ ಸ್ಥಿತಿ ಅವರದ್ದಾಗಿರುತ್ತದೆ. ಅವರು ನಿಮಗೆ ಹೇಗೆ ಇಲ್ಲ ಎನ್ನುತ್ತಾರೆ. ಹಾಗಾಗಿ ಒಪ್ಪಿಕೊಳ್ಳುತ್ತಾರೆ. ಮುಂದೊಂದು ದಿನ ನೀವು ಖಾನ್ ಗಳ ಜೊತೆ ಕುಳಿತು ಸಂದರ್ಶನ ನಡೆಸಿದರೂ ಅಚ್ಚರಿಯಾಗುವುದಿಲ್ಲ. ದಯಮಾಡಿ ನಮ್ಮನ್ನು ಬಿಟ್ಟು ಬಿಡಿ ಎಂದು ಬರೆದುಕೊಂಡಿದ್ದಾರೆ.
SCROLL FOR NEXT